Select Your Language

Notifications

webdunia
webdunia
webdunia
webdunia

ಬುಲ್ಡೋಜರ್ ನಿಂದ ಆಪರಾಧಿಗಳ ಮನೆ ಧ್ವಂಸಕ್ಕೆ ಸುಪ್ರೀಂಕೋರ್ಟ್ ಬ್ರೇಕ್

Supreme Court

Krishnaveni K

ನವದೆಹಲಿ , ಸೋಮವಾರ, 2 ಸೆಪ್ಟಂಬರ್ 2024 (15:39 IST)
ನವದೆಹಲಿ: ಉತ್ತರ ಪ್ರದೇಶದಂತಹ ಕೆಲವು ರಾಜ್ಯಗಳಲ್ಲಿ ಅಪರಾಧಿಗಳಿಗೆ ಸಂಬಂಧಪಟ್ಟ ಕಟ್ಟಡದ ಮೇಲೆ ಬುಲ್ಡೋಜರ್ ಹರಿಸಿ ಧ್ವಂಸ ಮಾಡುತ್ತಿರುವ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.

ಆರೋಪಿ ಎಂದು ಮಾತ್ರವಲ್ಲ, ಅಪರಾಧಿ ಎಂದೇ ಕೋರ್ಟ್ ನಲ್ಲಿ ಸಾಬೀತಾದರೂ ಅಂತಹವರಿಗೆ ಸೇರಿದ ಕಟ್ಟಡಗಳ ಮೇಲೆ ಬುಲ್ಡೋಜರ್ ಹರಿಸಿ ಧ್ವಂಸ ಮಾಡುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಆ ಮೂಲಕ ಬುಲ್ಡೋಜರ್ ನ್ಯಾಯದ ವಿರುದ್ಧ ಅಸಮಾಧಾನ ಹೊರಹಾಕಿದೆ.

ಅಪರಾಧಿ ಎಂದು ಸಾಬೀತಾದರೂ ಅಂತಹವರ ಮನೆಗಳನ್ನು ಧ್ವಂಸ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳು ಇದನ್ನು ಹೇಗೆ ಮಾಡುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿದೆ. ಅಪರಾಧಿಗಳ ಮನೆ ಧ್ವಂಸ ಮಾಡುವ ಪ್ರಕ್ರಿಯೆ ವಿರುದ್ಧ ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿಆರ್ ಗವಾಯಿ, ಮಗ ದಂಗೆಕೋರನೇ ಇರಬಹುದು. ಆದರೆ ಹಾಗಂತ ಆತನ ಮನೆ ಧ್ವಂಸ ಮಾಡಿದರೆ ಆತನ ತಂದೆ-ತಾಯಿ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನೆ ಮಾಡಿದೆ. ಅನಧಿಕೃತ ಕಟ್ಟಡಗಳಾಗಿದ್ದರೆ ಅದನ್ನು ಸಮರ್ಥಿಸಬಹುದು. ಆದರೆ ಅಪರಾಧಿಗಳ ಮನೆ ಕೆಡವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಂಗೂ ಸಿಎಂ ಆಗಬೇಕೆಂಬ ಆಸೆ ಇರಲ್ವಾ: ಸಿಎಂ ಕುರ್ಚಿ ಜಮೀರ್ ಅಹ್ಮದ್ ಕಣ್ಣು