Select Your Language

Notifications

webdunia
webdunia
webdunia
webdunia

ದೆಹಲಿ ಬಳಿಕ ಒಂದೇ ಮಳೆಗೆ ಹಾರಿ ಹೋಯ್ತು ರಾಜ್ ಕೋಟ್ ಏರ್ ಪೋರ್ಟ್ ಮೇಲ್ಛಾವಣಿ

ದೆಹಲಿ ಬಳಿಕ ಒಂದೇ ಮಳೆಗೆ ಹಾರಿ ಹೋಯ್ತು ರಾಜ್ ಕೋಟ್ ಏರ್ ಪೋರ್ಟ್ ಮೇಲ್ಛಾವಣಿ

Sampriya

ಗುಜರಾತ್ , ಶನಿವಾರ, 29 ಜೂನ್ 2024 (15:28 IST)
Photo Courtesy X
ಗುಜರಾತ್: ಭಾರೀ ಮಳೆಗೆ ನವದೆಹಲಿಯ ಇಂದಿರಾಗಾಂಧಿ ಏರ್‌ಪೋರ್ಟ್‌ನಲ್ಲಿ ಮೇಲ್ಛಾವಣಿ ಕುಸಿದು ಒಬ್ಬರು ಸಾವನ್ನಪ್ಪಿದ ದುರ್ಘಟನೆ ಬೆನ್ನಲ್ಲೇ  ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣದ ಹೊರಗಿನ ಪ್ರಯಾಣಿಕರ ಪಿಕಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ಮೇಲಾವರಣ ಕುಸಿದಿರುವ ಘಟನೆ ನಡೆದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಯಾವುದೇ ಗಾಯಗಳು ಅಥವಾ ಸಾವುನೋವುಗಳ ವರದಿಯಾಗಿಲ್ಲ. ಗುಜರಾತ್‌ನ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯ ಹಿನ್ನೆಲೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ  ಏಳು ತಂಡಗಳನ್ನು ಕಚ್, ರಾಜ್‌ಕೋಟ್, ದೇವಭೂಮಿ ದ್ವಾರಕಾ, ಗಿರ್ ಸೋಮನಾಥ್, ಭಾವನಗರ, ನರ್ಮದಾ ಮತ್ತು ವಲ್ಸಾದ್ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.

ಇದೇ ರೀತಿಯ ಘಟನೆ ಮಧ್ಯಪ್ರದೇಶದ ಜಬಲ್‌ಪುರ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಭವಿಸಿದ್ದು, ಭಾರೀ ಮಳೆಯ ನಡುವೆ ನೀರು ಶೇಖರಣೆಯಾಗಿ ಬಟ್ಟೆಯ ಮೇಲಾವರಣದ ಒಂದು ಭಾಗ ಕುಸಿದು ಕೆಳಗೆ ನಿಂತಿದ್ದ ಕಾರನ್ನು ನುಜ್ಜುಗುಜ್ಜಾಗಿದೆ. ಆದರೆ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 10 ರಂದು ದುಮ್ನಾ ವಿಮಾನ ನಿಲ್ದಾಣದ ₹ 450 ಕೋಟಿ ವೆಚ್ಚದ ಹೊಸ ಟರ್ಮಿನಲ್ ಕಟ್ಟಡವನ್ನು ವಾಸ್ತವಿಕವಾಗಿ ಉದ್ಘಾಟಿಸಿದ್ದರು.

ಇನ್ನೂ ಬಾರೀ ಮಳೆಗೆ ಶುಕ್ರವಾರ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಛಾವಣಿಯ ಒಂದು ಭಾಗವು ಕುಸಿದು ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು. ಇನ್ನೂ ಹಲವು ಮಂದಿ ಗಾಯಗೊಂಡಿದ್ದಾರೆ.

ಇಂತಹ ಘಟನೆಗಳನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ರಚನಾತ್ಮಕ ಪ್ರಾಥಮಿಕ ತಪಾಸಣೆಯನ್ನು ಕೈಗೊಳ್ಳಲು ಸಚಿವಾಲಯ ಆದೇಶಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕವಾದ ವಿಕ್ರಮ್ ಮಿಶ್ರಿ ಹಿನ್ನೆಲೆ ನೋಡಿದ್ರೆ ಶಾಕ್ ಆಗ್ತೀರಾ