Select Your Language

Notifications

webdunia
webdunia
webdunia
webdunia

ಪ್ರಚಾರದ ವೇಳೆ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಕಣ್ಣಿಗೆ ಗಾಯ‌

Sushma Swaraj’s Daughter

Sampriya

ನವದೆಹಲಿ , ಬುಧವಾರ, 10 ಏಪ್ರಿಲ್ 2024 (17:30 IST)
Photo Courtesy X
ನವದೆಹಲಿ: ಲೋಕಸಭಾ ಚುನಾವಣೆಗೆ ನವದೆಹಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್‌ಗೆ ಪ್ರಚಾರದ ವೇಳೆ ಕಣ್ಣಿಗೆ ಗಾಯವಾಗಿದೆ.  

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪೋಟೋ ಹಂಚಿಕೊಂಡಿರುವ ಬಾನ್ಸುರಿ ಅವರು, ಪ್ರಚಾರದ ವೇಳೆ ಎಡಗಣ್ಣಿಗೆ ಗಾಯವಾಗಿದೆ ಎಂದು ಬರೆದುಕೊಂಡಿದ್ದಾರೆ.

ಪ್ರಚಾರದ ವೇಳೆ ಕಣ್ಣಿಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದೆ, ತಕ್ಷಣ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಇವರ ಸುಷ್ಮಾ ಸ್ವರಾಜ್ ಅವರ ಪುತ್ರಿಯಾಗಿದ್ದು, ಮೊದಲ ಬಾರಿಗೆ ನವದೆಹಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರ: ಬಾವಿಗೆ ಬಿದ್ದ ಬೆಕ್ಕು ರಕ್ಷಣೆಗೆ ಹೋದ ಐವರು ದುರ್ಮರಣ