Select Your Language

Notifications

webdunia
webdunia
webdunia
webdunia

ಮಸೀದಿ ವಿವಾದ : ನಾಳೆ ಮಹತ್ವದ ಆದೇಶ

ಮಸೀದಿ ವಿವಾದ : ನಾಳೆ ಮಹತ್ವದ ಆದೇಶ
ನವದೆಹಲಿ , ಸೋಮವಾರ, 23 ಮೇ 2022 (14:48 IST)
ನವದೆಹಲಿ : ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ವಾರಣಾಸಿಯ ಜಿಲ್ಲಾ ನ್ಯಾಯಾಲಯ ಮಹತ್ವದ ಆದೇಶ ನೀಡಲಿದೆ.

ಸುಪ್ರೀಂಕೋರ್ಟ್ ಆದೇಶದನ್ವಯ ಇಂದು ಸುಮಾರು 45 ನಿಮಿಷಗಳ ಸುಧೀರ್ಘ ವಿಚಾರಣೆ ನಡೆಸಿದ ನ್ಯಾ. ಅಜಯ್ ಕೃಷ್ಣ ವಿಶ್ವೇಶ ನಾಳೆಗೆ ತೀರ್ಪು ಕಾಯ್ದಿರಿಸಿದರು.

ವಿಚಾರಣೆ ವೇಳೆ ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಹಿಂದೂ ಪರ ವಕೀಲರು ಸಲ್ಲಿಸಿದ್ದ ಅರ್ಜಿಗೆ ಮಸೀದಿ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು.

1991 ಕಾಯಿದೆ ಅನ್ವಯ ಈ ಅರ್ಜಿ ವಿಚಾರಣೆ ಅರ್ಹವಾಗಿಲ್ಲ, ಇದು ಆರ್ಡರ್ 7 ರೂಲ್ 11 ಉಲ್ಲಂಘನೆಯಾಗಿದೆ ಎಂದು ವಾದಿಸಿದರು. 

ಈ ನಿಯಮ ಉಲ್ಲಂಘಿಸಿ ನಡೆಸಿದ ಸರ್ವೆ ಕೂಡಾ ಅನೂರ್ಜಿತವಾಗಿದ್ದು ಮೊದಲು ಈ ಅರ್ಜಿ ವಿಚಾರಣೆಗೆ ಅರ್ಹವೇ? ಅಲ್ಲವೇ? ಎಂದು ತಿರ್ಮಾನವಾಗಬೇಕು ಎಂದು ಕೋರ್ಟ್ ಗೆ ಮನವಿ ಮಾಡಿದರು.

ಈ ವಿಚಾರಣೆ ವೇಳೆ ಹಿಂದೂ ಪರ ವಕೀಲರಿಂದ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದ್ದು, ಮೇ 16 ರಿಂದ 19 ವರೆಗೂ ವಜುಖಾನದಲ್ಲಿ ವಜು ಮಾಡಿದವರ ವಿರುದ್ಧ 156 (3) ಸಿಆರ್ಸಿಪಿ, ಐಪಿಸಿ 153ಎ (2), 505 (3) ಅಡಿಯಲ್ಲಿ ಎಫ್ಐಆರ್ ದಾಖಲಿಸಲು ಮನವಿ ಮಾಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈನ ರೇವ್‌ ಪಾರ್ಟಿಯಲ್ಲಿ ಟೆಕ್ಕಿ ಬಲಿ: ಡ್ರಗ್ಸ್‌ ಓವರ್‌ ಡೋಸ್?