Select Your Language

Notifications

webdunia
webdunia
webdunia
webdunia

ಚೆನ್ನೈನ ರೇವ್‌ ಪಾರ್ಟಿಯಲ್ಲಿ ಟೆಕ್ಕಿ ಬಲಿ: ಡ್ರಗ್ಸ್‌ ಓವರ್‌ ಡೋಸ್?

Rave Party Chennai Mall ರೇವ್‌ ಪಾರ್ಟಿ ಚೆನ್ನೈ ಮಾಲ್
bengaluru , ಸೋಮವಾರ, 23 ಮೇ 2022 (14:47 IST)
ರೇವ್‌ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ೨೩ ವರ್ಷದ ಯುವಕನೊಬ್ಬ ಅತೀಯಾದ ಡ್ರಗ್ಸ್‌ ಸೇವನೆಗೆ ಬಲಿಯಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಶನಿವಾರ ರಾತ್ರಿ ನಡೆದ ಟಾಪ್‌ ಆನ್‌ ದಿ ರೂಫ್ ರೇವ್‌ ಪಾರ್ಟಿಯಲ್ಲಿ ಪಾಲೊಂಡಿದ್ದ ಯುವಕ ಪ್ರಜ್ಞೆ ಕಳೆದುಕೊಂಡು ಕುಸಿದುಬಿದ್ದಿದ್ದ. ಆತನನ್ನು ಕೂಡಲೇ ರಾಜೀವ್‌ ಗಾಂಧಿ ಆಸ್ಪತ್ರೆಗೆ ದಾಖಿಸಿಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಅಸುನೀಗಿದ್ದಾನೆ.
ಚೆನ್ನೈನ ಮಡಿಪಕ್ಕಮ್‌ ನಿವಾಸಿಯಾಗಿರುವ ಸಾಫ್ಟ್‌ ವೇರಿ ಉದ್ಯೋಗಿ ಎಸ್.ಪ್ರವೀಣ್‌ ಮೃತಪಟ್ಟ ದುರ್ದೈವಿ.
ಗ್ರೇಟ್‌ ಇಂಡಿಯಾ ಗ್ಯಾಧರಿಂಗ್‌ ಎಂಬ ಹೆಸರಿನ ಕಂಪನಿಯೊಂದು ಈ ರೇವ್‌ ಪಾರ್ಟಿಯನ್ನು ಆಯೋಜಿಸಿದ್ದು, ಇ-ಮೇಲ್‌ ಮೂಲಕ ಆತನಿಗೆ ಸಂದೇಶ ಬಂದಿತ್ತು. ಯುವಕ ಅಸ್ವಸ್ಥಗೊಂಡು ಬಿದ್ದಿದ್ದಾನೆ ಎಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

11 ದಿನದಲ್ಲಿ ಮೌಂಟ್ ಎವರೆಸ್ಟ್ ಏರಿದ 10 ವರ್ಷದ ಬಾಲಕಿ!