Select Your Language

Notifications

webdunia
webdunia
webdunia
webdunia

ಹೆತ್ತವರ ಕೊಳೆತ ಶವದೊಂದಿಗೆ ವಾಸಿಸುತ್ತಿದ್ದ ಮಾನಸಿಕ ಅಸ್ವಸ್ಥೆ!

ಹೆತ್ತವರ ಕೊಳೆತ ಶವದೊಂದಿಗೆ ವಾಸಿಸುತ್ತಿದ್ದ ಮಾನಸಿಕ ಅಸ್ವಸ್ಥೆ!
ಕೋಲ್ಕತ್ತಾ , ಮಂಗಳವಾರ, 1 ಡಿಸೆಂಬರ್ 2020 (08:50 IST)
ಕೋಲ್ಕತ್ತಾ : ಮಹಿಳೆಯೊಬ್ಬಳು ತನ್ನ ಹೆತ್ತವರ ಮೃತದೇಹಗಳೊಂದಿಗೆ ತನ್ನ ನಿವಾಸದಲ್ಲಿ ವಾಸಿಸುತ್ತಿದ್ದ ಘಟನೆ ಪಶ್ವಿಮ ಬಂಗಾಳದ ಕೋಲ್ಕತ್ತಾ ಬಳಿಯ ಉತ್ತರ 24 ಪರಗಣ ಜಿಲ್ಲೆಯ ಬಾರಾನಗರದಲ್ಲಿ ಬೆಳಕಿಗೆ ಬಂದಿದೆ.

ಮೃತ ದಂಪತಿ ವೃತ್ತಿಯಲ್ಲಿ ವೈದ್ಯರಾಗಿದ್ದರು ಮತ್ತು ಅವರ ಮಗಳು ಮಾನಸಿಕ ಅಸ್ವಸ್ಥೆಯಾಗಿದ್ದು, ಪತಿಯಿಂದ ವಿಚ್ಚೇಧನ ಪಡೆದಿದ್ದಳು. ಇವರು ಅಪಾರ್ಟ್ಮೆಂಟ್  ನಲ್ಲಿ ವಾಸವಾಗಿದ್ದರು. ಆದರೆ ಮಹಿಳೆಯ ಹೆತ್ತವರು ಮೃತಪಟ್ಟಿದ್ದು. ಆಕೆ ಈ ವಿಚಾರ ಯಾರಿಗೂ ತಿಳಿಸದೆ ಮೃತದೇಹಗಳ ಜೊತೆಗೆ ವಾಸಿಸುತ್ತಿದ್ದಳು.

ನೆರೆಮನೆಯವರು ಮಹಿಳೆಯ ಮನೆಯಿಂದ ಕೊಳೆತ ವಾಸನೆ ಗ್ರಹಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಶವವನ್ನು ವಶಕ್ಕೆ ಪಡೆದ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನು ಥಳಿಸಿದ ಪತಿ ಕೊನೆಗೆ ಮಾಡಿದ್ದೇನು?