Select Your Language

Notifications

webdunia
webdunia
webdunia
webdunia

ಐಎಸ್‌ಐ ಜತೆ ನಂಟು ಬೆಳೆಸಿ ಖತರ್ನಾಕ್ ಕೆಲಸ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್‌

Arms smuggling Case

Sampriya

ನವದೆಹಲಿ , ಶನಿವಾರ, 22 ನವೆಂಬರ್ 2025 (16:50 IST)
ನವದೆಹಲಿ: ಐಎಸ್‌ಐ ಜತೆ ನಂಟು ಹೊಂದಿದ ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಭೇದಿಸಿದ  ದೆಹಲಿ ಪೊಲೀಸರು, ಗ್ಯಾಂಗ್ ಸಂಬಂಧ ಈಗಾಗಲೇ ನಾಲ್ವರನ್ನು ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳನ್ನು ಪಂಜಾಬ್‌ನ ಮಂದೀಪ್ ಸಿಂಗ್ (38), ದಲ್ವಿಂದರ್ ಕುಮಾರ್ (34), ಉತ್ತರ ಪ್ರದೇಶದ ಬಾಗ್‌ಪತ್ ನಿವಾಸಿಗಳಾದ ರೋಹನ್ ತೋಮರ್ (30) ಮತ್ತು ಅಜಯ್ ಅಲಿಯಾಸ್ ಮೋನು (37) ಎಂದು ಗುರುತಿಸಲಾಗಿದೆ.

ಇವರು ಉತ್ತರ ಭಾರತದಾದ್ಯಂತ ಸಂಘಟಿತ ಅಪರಾಧಗಳಿಗೆ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. 

ಈ ಜಾಲವು ಡ್ರೋನ್‌ಗಳನ್ನು ಬಳಸಿ ಪಾಕ್‌ನಿಂದ ಕಳ್ಳಸಾಗಣೆ ಮಾಡಿದ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ದೆಹಲಿ , ಹರಿಯಾಣ, ಉತ್ತರ ಪ್ರದೇಶ ಮತ್ತು ಪಂಜಾಬ್‌ನ ದರೋಡೆಕೋರರಿಗೆ ಪೂರೈಸುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರಿಂದ  ಟರ್ಕಿ ನಿರ್ಮಿತ ಪಿಎಕ್ಸ್ -5.7 ಮಾದರಿಗಳು ಸೇರಿದಂತೆ 10 ಅತ್ಯಾಧುನಿಕ ಪಿಸ್ತೂಲ್‌ಗಳು ಮತ್ತು 92 ಸಜೀವ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೀನು ರಫ್ತಿನಲ್ಲಿ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ: ಸಿದ್ದರಾಮಯ್ಯ