ಅಲಪ್ಪುಳ: ಮದುವೆ ದಿನವೇ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ವಧುವಿಗೆ ಆಸ್ಪತ್ರೆಯಲ್ಲೇ ವರ ತಾಳಿ ಕಟ್ಟಿದ ಘಟನೆ ಕೇರಳದ ಆಲಪ್ಪುಳದ ಥಂಪೋಲಿಯಲ್ಲಿ ನಡೆದಿದೆ.
ಈ ಘಟನೆಯ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಭಾವನಾತ್ಮಕವಾಗಿ ಸ್ಪೂರ್ತಿದಾಯಕವಾದ ಕ್ಷಣ ಭಾರೀ ಮೆಚ್ಚುಗೆಯನ್ನು ಪಡೆಯುತ್ತಿದೆ.
ಇಂದು ಮಧ್ಯಾಹ್ನ 12.12 ರಿಂದ 12.25 ರವರೆಗೆ ಅಲಪ್ಪುಳದ ಶಕ್ತಿ ಆಡಿಟೋರಿಯಂನಲ್ಲಿ ಮದುವೆಯ ಮುಹೂರ್ತವನ್ನು ನಿಗದಿಪಡಿಸಲಾಗಿತ್ತು. ಆದರೆ, ಬ್ಯೂಟಿ ಪಾರ್ಲರ್‌ನಿಂದ ಹಿಂತಿರುಗುತ್ತಿದ್ದಾಗಿ ವಧುವಿದ್ದ ಕಾರು ಅಪಘಾತಕ್ಕೀಡಾಗಿದೆ.
ಗಂಭೀರವಾಗಿ ಗಾಯಗೊಂಡ ಅವನಿಯನ್ನು ಮೊದಲು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಮತ್ತು ನಂತರ ಕೊಚ್ಚಿಯ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳಿಲ್ಲ ಎಂದು ವೈದ್ಯರು ತಿಳಿಸಿದ ನಂತರ ಆಸ್ಪತ್ರೆಯಲ್ಲಿ ತಾಳಿಕಟ್ಟೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಒಂದು ಕಾರು ಅಪಘಾತ ಅವರ ಕನಸುಗಳನ್ನು ಹಾಳುಮಾಡಿದರೂ, ಅದು ಅವರ ಪ್ರೀತಿಯನ್ನು ಕುಗ್ಗಿಸಲು ಸಾಧ್ಯವಾಗಲಿಲ್ಲ. ಆಸ್ಪತ್ರೆಯಲ್ಲಿ ತಮ್ಮ ಆತ್ಮೀಯರ ಸಮ್ಮುಖದಲ್ಲಿ ವರನು ಅವಳ ಕುತ್ತಿಗೆಗೆ ತಾಳಿ ಕಟ್ಟಿದನು. ಅಪಘಾತದ ಭಯದ ನಡುವೆಯೂ ತುಂಪೋಳಿಯ ಶರೋನ್ ಮತ್ತು ಅವನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.