ಬೆಂಗಳೂರು: ನನ್ನತ್ರ ಯಾವಾ ಬಣನೂ ಇಲ್ಲ, ನಾನು ಯಾವ ಬಣದ ನಾಯಕನೂ ಅಲ್ಲ. 147 ಶಾಸಕರಿಗೂ ಅಧ್ಯಕ್ಷ, ನನಗೆ ಅವರೆಲ್ಲರೂ ಸಾಮಾನರೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ದೆಹಲಿಗೆ ಕೆಲ ಶಾಸಕರು ಡಿಕೆ ಶಿವಕುಮಾರ್ ಪರ ಶಕ್ತಿ ಪ್ರದರ್ಶಿಸಲು ಹೋಗಿದ್ದಾರೆಂಬ ಚರ್ಚೆಯ ಬಗ್ಗೆ ಮಾಧ್ಯಮದವರು ಅವರನ್ನು ಪ್ರಶ್ನಿಸಿದಾಗ, ನನಗೆ ಯಾವಾ ಗುಂಪನ್ನು ಕರೆದುಕೊಂಡು ಹೋಗಲು ಇಷ್ಟನೂ ಇಲ್ಲ, ಅದನ್ನು ಮಾಡುವುದೂ ಇಲ್ಲ ಎಂದರು.
ಸಚಿವ ಸಂಪುಟವನ್ನು ಪುನರ್ ರಚನೆ ಮಾಡುವುದನ್ನು ಸಿಎಂ ಸಿದ್ದರಾಮಯ್ಯ ಅವರು ನಿರ್ಧಾರ ಮಾಡುತ್ತಾರೆ. ಸರ್ಕಾರವನ್ನು ಅವರು ಪುನರ್ ರಚನೆ ಮಾಡುತ್ತಾರೆ. ಹಾಗಾಗಿ ಎಲ್ಲ ಶಾಸಕರು ಕೂಡಾ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಹಾಗಾಗಿ ಅವರೆಲ್ಲ ದೆಹಲಿಯಲ್ಲಿ ನಾಯಕರನ್ನು ಭೇಟಿಯಾಗಲು ಹೋಗಿದ್ದಾರೆ. ಇದು ಸರ್ವೇಸಾಮಾನ್ಯ ಎಂದರು.
ಅವರಿಗೆಲ್ಲ ಹಕ್ಕಿದೆ. ಮಲ್ಲಿಕಾರ್ಜುನ್ ಅವರನ್ನು ಕೆಲವರು ಭೇಟಿಯಾಗಿದ್ದಾರೆ. ಅದರಲ್ಲೇನಿದೆ ತಪ್ಪು ಎಂದು ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದರು.