ಆಫೀಸ್‌ನಲ್ಲಿ ಸಹೋದ್ಯೋಗಿಗಳೊಂದಿಗೆ ಆಫೇರ್ ಹೊಂದಿದ್ದ ಸಲುವಾಗಿ ಅಮೆರಿಕದ ಉನ್ನತ ವಿಮಾ ಕಂಪನಿಯೊಂದರಲ್ಲಿ ವರ್ಷಕ್ಕೆ £10 ಮಿಲಿಯನ್ ಉದ್ಯೋಗವನ್ನು ಜಾನ್ ನೀಲ್ ಕಳೆದುಕೊಂಡಿದ್ದಾರೆ.
ಈ ಬಗ್ಗೆ ಸ್ವತಃ ಕಳೆದ ವಾರ ಅಮೇರಿಕನ್ ಇಂಟರ್ನ್ಯಾಷನಲ್ ಗ್ರೂಪ್ ಇಂಕ್ ಮಾಹಿತಿ ನೀಡಿದ್ದು, 'ಮುಂಬರುವ ಅಧ್ಯಕ್ಷ ಜಾನ್ ನೀಲ್ ಅವರೊಂದಿಗೆ ಬೇರ್ಪಡುತ್ತಿರುವುದಾಗಿ ಪ್ರಕಟಣೆಯಲ್ಲಿ ಘೋಷಣೆ ಮಾಡಿದೆ.
ಉದ್ಯಮದ ಈ ನಡೆ ಭಾರೀ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಶತಮಾನಗಳಷ್ಟು ಹಳೆಯದಾದ ವಿಮಾ ಮಾರುಕಟ್ಟೆಯಾದ ಲಾಯ್ಡ್ಸ್, ಕಂಪನಿಯ PR ಕಾರ್ಯನಿರ್ವಾಹಕರಾದ ರೆಬೆಕಾ ಕ್ಲೆಮೆಂಟ್ ಅವರೊಂದಿಗೆ ನೀಲ್ ಸಂಬಂಧವನ್ನು ಹೊಂದಿದ್ದರು.
ಈ ಸಂಬಂಧ ಸಂಸ್ಥೆ ಈಗಾಗಲೇ ಜಾನ್ ನೀಲ್ ರಿಂದ ಸ್ಪಷ್ಟನೆ ಕೇಳಿತ್ತು. ಆದರೆ ಅವರಿಂದ ಸಮಾಧಾನಕರ ಉತ್ತರ ಬಂದಿರಲಿಲ್ಲ. ಇದೇ ವಿಚಾರವಾಗಿ AIG ಕೂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿತ್ತು.