ಕೋಯಿಕ್ಕೋಡ್: ಶಬರಿಮಲೆ ಚಿನ್ನ ಕಳವು ಪ್ರಕರಣ ಸಂಬಂಧ ಕಪ್ಪುಹಣ ವಹಿವಾಟು ನಡೆದಿದ್ದರೆ ಕೇಂದ್ರ ತನಿಖಾ ಸಂಸ್ಥೆಗಳು ಮಧ್ಯಪ್ರವೇಶಿಸಬಹುದು ಎಂದು ಸಚಿವರಾಗಿರುವ ಜಾರ್ಜ್ ಕುರಿಯನ್ ಹೇಳಿದ್ದಾರೆ.
ಅಲ್ಲದೆ ಕಳ್ಳತನದಲ್ಲಿ ಭಾಗಿಯಾದವರನ್ನು ಅಯ್ಯಪ್ಪ ಸ್ವಾಮಿ ಸುಮ್ಮನೆ ಬಿಡುವುದಿಲ್ಲ ಎಂದು ಎಂದಿದ್ದಾರೆ.
ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿರುವುದರಿಂದ ಕೇಂದ್ರ ತನಿಖಾ ಸಂಸ್ಥೆಗಳೂ ಕಾನೂನಿನ ಪ್ರಕಾರ ಮಧ್ಯಪ್ರವೇಶ ಮಾಡಬಹುದು. ಇದೊಂದು ರಾಜಕೀಯವಲ್ಲ, ಕಾನೂನು ಪ್ರಕಾರ ನಡೆಯಲಿದೆ. ತನಿಖಾ ಸಂಸ್ಥೆಗಳು ಮಧ್ಯ ಪ್ರವೇಶಿಸಲಿದೆ ಎಂದು ನಾನು ನಂಬುತ್ತೇನೆ ಎಂದರು.
ಇನ್ನೂ ಪ್ರಕರಣದಲ್ಲಿ ಭಾಗಿಯಾದವರೆಲ್ಲಾ ನಾಸ್ತಿಕರು ಎಂದು ಹೇಳಿದ ಅವರು, ನಾವು ನಮ್ಮ ಸೈದ್ಧಾಂತಿಕ ಕರ್ತವ್ಯವನ್ನು ನಿರ್ವಹಿಸಿದ್ದೇವೆ ಎನ್ನುವ ಅರಿವಿನೊಂದಿಗೆ ಅವರು ನಗುತ್ತಲೇ ಹೋಗಿದ್ದಾರೆ ಎಂದರು.