Publish Date: Sun, 30 Oct 2022 (12:59 IST)
Updated Date: Sun, 30 Oct 2022 (12:33 IST)
ಹೈದರಾಬಾದ್ : ಮಗಳು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾಳೆ ಎಂದು ಶಂಕಿಸಿ ಆಕೆಯನ್ನು ಕೊಡಲಿಯಿಂದ ಕೊಚ್ಚಿ ತಂದೆಯೇ ಹತ್ಯೆಗೈದಿರುವ ಘಟನೆ ತೆಲಂಗಾಣದ ವನಪರ್ತಿಯಲ್ಲಿ ನಡೆದಿದೆ.
ಆರೋಪಿಯನ್ನು ರಾಜಶೇಖರ್ ಎಂದು ಗುರುತಿಸಲಾಗಿದ್ದು, ಮಗಳು ಗೀತಾ(15) ಮೃತ ದುರ್ದೈವಿಯಾಗಿದ್ದಾಳೆ. ಬೇರೆ ಹುಡುಗರೊಂದಿಗೆ ಮಾತನಾಡಬೇಡ ಎಂದರೂ, ಗ್ರಾಮದ ಕೆಲ ಹುಡುಗರೊಂದಿಗೆ ಮಾತನಾಡುತ್ತಿದ್ದಳು ಎಂದು ರಾಜಶೇಖರ್ ಆರೋಪಿಸಿದ್ದಾನೆ.
ಪೆಬ್ಬೇರು ಮಂಡಲದ ಪಾತಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಗಳು ಪ್ರೀತಿಸುತ್ತಿದ್ದ ವಿಚಾರ ತಿಳಿದ ರಾಜಶೇಖರ್ ಕುಟುಂಬದ ಮರ್ಯಾದೆಗೆ ಹಾನಿಯಾಗುತ್ತದೆ ಎಂದು ಗೀತಾಳಿಗೆ ಸಾಕಷ್ಟು ಬಾರಿ ಬುದ್ದಿ ಹೇಳಿದರೂ ಕೇಳದ ಕಾರಣ ಮಗಳನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿದ್ದಾನೆ.