Select Your Language

Notifications

webdunia
webdunia
webdunia
webdunia

ಓಮಿಕ್ರಾನ್ ಉಪತಳಿ BQ.1 ಪತ್ತೆ ! ಕರ್ನಾಟಕದಲ್ಲಿ ಕಟ್ಟೆಚ್ಚರ

webdunia
ಬೆಂಗಳೂರು , ಭಾನುವಾರ, 30 ಅಕ್ಟೋಬರ್ 2022 (12:41 IST)
ಬೆಂಗಳೂರು : ಕಳೆದ ಕೆಲ ತಿಂಗಳುಗಳಿಂದ ಜನರಲ್ಲಿ ಕೊರೊನಾ ಭೀತಿ ಕಡಿಮೆಯಾಗಿದೆ. ನವರಾತ್ರಿ ಕಳೆದು ಇದೀಗ ದೇಶಾದ್ಯಂತ ಜನರು ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ.

ಆದರೆ ಇದರ ನಡುವೆಯೇ ಕರ್ನಾಟಕಕ್ಕೆ ಓಮಿಕ್ರಾನ್ ಉಪತಳಿ BQ.1ನ ಭೀತಿ ಹುಟ್ಟಿಕೊಂಡಿದೆ. ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ರೂಪಾಂತರಿ BQ.1 ತಳಿ ಪತ್ತೆಯಾಗಿದ್ದು, ಇದೀಗ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ದೀಪಾವಳಿ, ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಜನಸಂದಣಿ ಹೆಚ್ಚಾಗುವ ಸಾಧ್ಯತೆಯಿದ್ದು, ಈ ವೇಳೆ ರೋಗ ಹರಡುವ ಭೀತಿಯೂ ಹುಟ್ಟಿಕೊಂಡಿದೆ.

ಈ ಹಿನ್ನೆಲೆ ಜ್ವರ, ಕೆಮ್ಮು, ನೆಗಡಿಯ ಲಕ್ಷಣ ಇರುವವರಿಗೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಉಸಿರಾಟದ ಸಮಸ್ಯೆ ಇರುವವರ ಮೇಲೆ ಹೆಚ್ಚಿನ ನಿಗಾ ವಹಿಸಲು ಆರೋಗ್ಯ ಇಲಾಖೆ ತಿಳಿಸಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿಗೆ ನೋಟಿಸ್ ಜಾರಿ?