ನವದೆಹಲಿ : ಸದ್ಯ ಮಾರುಕಟ್ಟೆಯಲ್ಲಿರುವ 26 ಔಷಧಿಗಳನ್ನು ಕೇಂದ್ರ ಸರ್ಕಾರ ಅಗತ್ಯ ಔಷಧಿಗಳ ಪಟ್ಟಿಯಿಂದ ಹೊರಕ್ಕೆ ಇಟ್ಟಿದೆ.
ತುರ್ತು ಬಳಕೆಯ ಔಷಧಿಗಳ ಪಟ್ಟಿಯಿಂದ ಆಸಿಡಿಟಿ ನಿವಾರಣೆಗೆ ಬಳಸುವ ರಾನ್ಟ್ಯಾಕ್, ಜಿನ್ಟ್ಯಾಕ್ ಮಾತ್ರೆಗಳನ್ನು ತೊಲಗಿಸಿದೆ.
ಈ ಎರಡು ಮಾತ್ರೆಗಳ ಜೊತೆಗೆ ಒಟ್ಟು 26 ಮಾತ್ರೆಗಳನ್ನು ಹೊರಗಿಟ್ಟು ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ನಿಷೇಧಿತ ಔಷಧಿಗಳ ಪಟ್ಟಿಯಲ್ಲಿ ಎಜಿತ್ರೋಮೈಸಿನ್, ಪೆಂಟಾಮಿಡಿನ್ ಮಾತ್ರೆಗಳು ಕೂಡ ಸೇರಿವೆ. 384 ಅಗತ್ಯ ಔಷಧಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.