Publish Date: Sat, 29 Oct 2022 (20:24 IST)
Updated Date: Sat, 29 Oct 2022 (20:27 IST)
ಆತ್ಮಹತ್ಯೆ ಮಾಡಿಕೊಳ್ಳಲು ಒಬ್ಬ ವ್ಯಕ್ತಿ ನದಿಗೆ ಹಾರಿದ್ರೂ, ಪವಾಡದಂತೆ ಬದುಕಿ ಬಂದಿರುವ ಘಟನೆ ಬಳ್ಳಾರಿ ಜಿಲ್ಲೆಯ ಗಡಿಭಾಗದ ತುಂಗಭದ್ರಾ ನದಿಯಲ್ಲಿ ನಡೆದಿದೆ. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಪೂರ್ವ ಕಾಲ್ವಿ ಗ್ರಾಮದ ಶಿವು ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದ. ವೈಯಕ್ತಿಕ ಸಮಸ್ಯೆಯಿಂದ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದ. ನದಿಯಲ್ಲಿ ಮುಳುಗದೇ ಪವಾಡ ರೀತಿಯಲ್ಲಿ ತೇಲುತ್ತಿದ್ದದನ್ನು ಕಂಡು ಸ್ಥಳೀಯರು ದಂಗಾಗಿದ್ದಾರೆ. ನದಿಯಲ್ಲಿದ್ದ ವ್ಯಕ್ತಿ ಕಂಡು ಮೊದಲು ಶವ ಎಂದು ಭಾವಿಸಿದ್ದ ಸ್ಥಳೀಯರು, ಕೈಕಾಲು ಅಲಗಾಡಿಸುವುದನ್ನ ಕಂಡು ಕೂಡಲೇ ಹಗ್ಗ ಎಸೆದಿದ್ದಾರೆ. ಹಗ್ಗದ ಸಹಾಯದಿಂದ ಶಿವು ಮೇಲೆ ಬಂದಿದ್ದಾರೆ. ಸುಮಾರು ಐವತ್ತು ಅಡಿಯಷ್ಟು ಆಳವಿರೋ ನದಿಯಲ್ಲಿ ವ್ಯಕ್ತಿ ಮುಳುಗದೇ ಇದ್ದಿದ್ದೇ ರೋಚಕ ಘಟನೆಯಾಗಿದೆ.