Select Your Language

Notifications

webdunia
webdunia
webdunia
webdunia

ಬಾಲಕನ ಕಿವಿ ಕಚ್ಚಿ ಹರಿದು ಹಾಕಿದ ನಾಯಿ!

ಬಾಲಕನ ಕಿವಿ ಕಚ್ಚಿ ಹರಿದು ಹಾಕಿದ ನಾಯಿ!
ಚಂಡೀಗಢ , ಶನಿವಾರ, 30 ಜುಲೈ 2022 (14:32 IST)
ಚಂಡೀಗಢ : 13 ವರ್ಷದ ಬಾಲಕನ ಮೇಲೆ ಪಿಟ್ಬುಲ್ ನಾಯಿಯೊಂದು ದಾಳಿ ನಡೆಸಿದ್ದು, ಬಾಲಕನ ಕಿವಿಯನ್ನು ಕಚ್ಚಿ ಹರಿದು ಹಾಕಿರುವ ಘಟನೆ ಪಂಜಾಬ್ನ ಗುರುದಾಸ್ಪುರ ಜಿಲ್ಲೆಯಲ್ಲಿ ನಡೆದಿದೆ.

ಗುರುದಾಸ್ಪುರದ ಕೋಟ್ಲಿ ಭಾನ್ ಸಿಂಗ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದೇ ವೇಳೆ ಬಾಲಕನ ಜೊತೆಯೇ ಇದ್ದ ತಂದೆ, ಮಗನನ್ನು ನಾಯಿಯಿಂದ ಬಿಡಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ.

ಬಾಲಕ ಮತ್ತು ಆತನ ತಂದೆ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ತನ್ನ ಮಾಲೀಕರೊಂದಿಗೆ ಹೊರಗೆ ನಿಂತಿದ್ದ ಪಿಟ್ಬುಲ್ ನಾಯಿ ಹುಡುಗನನ್ನು ಬೊಗಳಲು ಪ್ರಾರಂಭಿಸಿತು. ಈ ವೇಳೆ ಆಕಸ್ಮಿಕವಾಗಿ ಮಾಲೀಕ ನಾಯಿಯ ಕೊರಳಿಗೆ ಕಟ್ಟಿದ್ದ ಬೆಲ್ಟ್ ಅನ್ನು ಕೈಯಿಂದ ಕೆಳಗೆ ಬಿಟ್ಟರು. ತಕ್ಷಣವೇ ನಾಯಿ ಓಡಿಬಂದು ಬಾಲಕನ ಮೇಲೆ ದಾಳಿ ಮಾಡಿತು. 


Share this Story:

Follow Webdunia kannada

ಮುಂದಿನ ಸುದ್ದಿ

ಭಾರೀ ಮಳೆಗೆ ಮನೆಗಳಿಗೆ ನುಗ್ಗಿತು ನೀರು!