Select Your Language

Notifications

webdunia
webdunia
webdunia
webdunia

ನಲಪಾಡ್​​ಗೆ ರಕ್ಷಾ ರಾಮಯ್ಯ ಕಿವಿಮಾತು

ನಲಪಾಡ್​​ಗೆ ರಕ್ಷಾ ರಾಮಯ್ಯ ಕಿವಿಮಾತು
bangalore , ಶುಕ್ರವಾರ, 13 ಮೇ 2022 (15:28 IST)
ಮಾಜಿ ಸಂಸದೆ, ನಟಿ ರಮ್ಯಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರ ಟ್ವೀಟ್ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ನಲಪಾಡ್​ ರಮ್ಯಾ ವಿರುದ್ಧ ಪ್ರತಿಕ್ರಿಯಿಸಿದ್ದಕ್ಕೆ ದೊಡ್ಡವರ ಮಾತಿನ ನಡುವೆ ನಾವು ತಲೆ ಹಾಕುವುದು ಬೇಡ ಎಂದು ರಕ್ಷಾ ರಾಮಯ್ಯ ನಲಪಾಡ್​​​​​ಗೆ ಬುದ್ದಿವಾದ ಹೇಳಿದ್ದಾರೆ. ರಮ್ಯಾ ಮತ್ತು ಡಿ.ಕೆ.ಶಿವಕುಮಾರ್ ವಿಚಾರವಾಗಿ ನಲಪಾಡ್ ಮಾತನಾಡಿದ್ದರು. ಇದಕ್ಕೆ ರಮ್ಯಾ ಖಾರವಾಗಿಯೆ ಪ್ರತಿಕ್ರಿಯೆ ನೀಡಿದ್ರು.ಇನ್ನು ಇವರ ಮಧ್ಯೆ ಟ್ವೀಟ್ ವಾರ್ ಮುಂದುವರೆದಿತ್ತು. ಈ ಕುರಿತು ದೊಡ್ಡವರು ಮಾತನಾಡುವುದು ಆಂತರಿಕ ವಿಷಯ.ಇದನ್ನು ನಾವು ವಿಮರ್ಶೆ ಮಾಡಿದ್ರೆ ಬೇರೆ ಅರ್ಥ ಆಗುತ್ತೆ. ಹಾಗಾಗಿ ಚಿಕ್ಕವರು ಸಾರ್ವಜನಿಕವಾಗಿ ಮಾತನಾಡುವುದು ಬೇಡ ಎಂದು ರಕ್ಷಾ ರಾಮಯ್ಯ ನಲಪಾಡ್​​​ಗೆ ಕಿವಿಮಾತು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಲಪಾಡ್ ಹ್ಯಾರಿಸ್​ ವಿರುದ್ಧ ರೊಚ್ಚಿಗೆದ್ದ ರಮ್ಯಾ