Publish Date: Fri, 13 May 2022 (15:25 IST)
Updated Date: Fri, 13 May 2022 (15:27 IST)
ಮಾಜಿ ಸಂಸದೆ, ನಟಿ ರಮ್ಯಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಟ್ವೀಟ್ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹ್ಯಾರಿಸ್ ಹೇಳಿಕೆ ನೀಡಿದ್ದು, ರಮ್ಯ ಇಷ್ಟು ವರ್ಷ ಎಲ್ಲಿದ್ದರು? ಸಡನ್ನಾಗಿ ಯಾಕೆ ಬಂದರು? ತಮ್ಮ ಅಸ್ತಿತ್ವ ತೋರಿಸಲು ಅವರು ಬಂದಿದ್ದಾರಾ ಅಥವಾ ನಾನೂ ಒಬ್ಬಳು ಇದೀನಿ ಅಂತ ತೋರಿಸಿಕೊಳ್ಳುತ್ತಿದ್ದಾರಾ?
ಅಥವಾ ಯಾವುದಾದರೂ ಒಂದು ಕುರ್ಚಿ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರಾ ಎನಿಸುತ್ತಿದೆ ಎಂದಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, ಜಾಮೀನಿನ ಮೇಲೆ ಹೊರಗಿರುವ ಈ ಹುಡುಗ ಯುವ ಕಾಂಗ್ರೆಸ್‌ನ ಗೌರವಾನ್ವಿತ ಅಧ್ಯಕ್ಷರು, ಶಾಸಕ ಎನ್‌ಎ ಹ್ಯಾರಿಸ್ ಅವರ ಪುತ್ರ. ಈತ ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾರೆ. ವ್ಹಾ ಇದು ಅದ್ಭುತ ಎಂದಿದ್ದಾರೆ. ಅದಲ್ಲದೇ ನಲಪಾಡ್ ವಿರುದ್ಧ ಕೇಳಿಬಂದಿರುವ ಆರೋಪಗಳ ವರದಿಗಳನ್ನು ಕೂಡ ಲಗತ್ತಿಸಿದ್ದಾರೆ.