Select Your Language

Notifications

webdunia
webdunia
webdunia
webdunia

ಕಳ್ಳನ ಕೈಚಳಕ : 825 ಗ್ರಾಂ ಬಂಗಾರ ಕಳೆದುಕೊಂಡ ಮಾಲೀಕ!

ಕಳ್ಳನ ಕೈಚಳಕ : 825 ಗ್ರಾಂ ಬಂಗಾರ ಕಳೆದುಕೊಂಡ ಮಾಲೀಕ!
ಬಳ್ಳಾರಿ , ಶುಕ್ರವಾರ, 13 ಮೇ 2022 (14:33 IST)
ಬಳ್ಳಾರಿ: ಅಂಗಡಿ ಮಾಲಿಕ ಒಂದೇ ಒಂದು ಕ್ಷಣ ಮೈ ಮರೆತ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಅಭರಣವನ್ನು ಹಾಡುಹಗಲೇ ಕಳ್ಳತನ ಮಾಡಲಾಗಿದೆ. ಇಂತಹದ್ದೊಂದು ಘಟನೆಗೆ ಸಂಡೂರಿನ ಬಂಗಾರದ ಅಂಗಡಿಯಲ್ಲಿ ನಡೆದಿದ್ದು ಘಟನೆಯಲ್ಲಿ ಕಳ್ಳನಕರಾಮತ್ತು ಮೆಚ್ಚಬೇಕೋ ಅಥವಾ ಮಾಲೀಕರ ನಿರ್ಲಕ್ಷ್ಯಕ್ಕೆ ತೆತ್ತ ಬೆಲೆ ಅನ್ನೋಬೇಕೋ ಗೊತ್ತಿಲ್ಲ.
 
ಸಂಡೂರು ಪಟ್ಟಣದ ಎಸ್‍ಎಸ್‍ವಿ ಜ್ಯುವೆಲರ್ಸ್‌ ಎನ್ನುವ ಬಂಗಾರದ ಅಂಗಡಿ. ಇಲ್ಲಿ ಹಾಡುಹಗಲೇ ಮೂವತ್ತು ಲಕ್ಷಕ್ಕೂ ಹೆಚ್ಚು ಮೊತ್ತದ ಬಂಗಾರದ ಆಭರಣ ಕಳ್ಳತನ ಮಾಡಲಾಗಿದೆ. ಎಂದಿನಂತೆ ಅಂಗಡಿ ಮಾಲೀಕ ಮೆಹಬೂಬ್ ಭಾಷ ಅಂಗಡಿಯ ಒಂದು ಬಾಗಿಲಿನ ಬೀಗ ತಗೆದು ಅಂಗಡಿಯೊಳಗೆ ಚಿನ್ನವಿದ್ದ ಚೀಲವನ್ನಿಟ್ಟಿದ್ದಾರೆ. 
 
ನಂತರ ಇನ್ನೊಂದು ಬಾಗಿಲು ತೆಗೆಯಲು ಪಕ್ಕದಲ್ಲೇ ನಿಂತು ಶೆಟರ್ ಬೀಗ ತೆಗೆಯುತ್ತಿದ್ದಾರೆ. ಈ ವೇಳೆ ಬಂದ ಕಳ್ಳ ಬಂಗಾರವಿದ್ದ ಬ್ಯಾಗ್ ಕಳ್ಳತನ ಮಾಡಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಬ್ಯಾಗ್‌ನಲ್ಲಿ 825 ಗ್ರಾಂ ಬಂಗಾರವಿದ್ದು 32,54,000 ಮೌಲ್ಯ ಆಗುತ್ತದೆ ಎಂದು ಹೇಳಲಾಗ್ತಿದೆ. ಈ ಕುರಿತು ಚಿನ್ನದಂಗಡಿ ಮಾಲೀಕ ಮೆಹಬೂಬ ಬಾಷಾ ಸಂಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ಇನ್ನೂ ಚಿನ್ನದ ಬ್ಯಾಗ ಕದ್ದು ಬೈಕ್‌ನಲ್ಲಿ ಪರಾರಿಯಾದ ಓರ್ವ ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ರಸ್ತೆಯಲ್ಲಿ ಮೂವರು ಕಳ್ಳರು ಬೈಕ್ ಮೇಲೆ ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಶೇಷವೆಂದರೆ ಚಿನ್ನ ಕದ್ದ ಕಳ್ಳರು ಪೊಲೀಸ್ ಠಾಣೆಯ ಮುಂದಿನ ರಸ್ತೆಯಲ್ಲೆ ಪರಾರಿಯಾಗಿದ್ದಾರೆ. ಸದ್ಯ ‌ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ಪೊಲೀಸರು ಸಿಸಿಟಿವಿಯ ಆಧಾರದಲ್ಲಿ ಕಳ್ಳರನ್ನು ಹುಡುಕುತ್ತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ ಅತ್ಯಂತ ಚಳಿ : 50 ವರ್ಷದಲ್ಲೇ ಇದೇ ಮೊದಲು