Select Your Language

Notifications

webdunia
webdunia
webdunia
webdunia

ಸರ್ಕಾರಿ ಹುದ್ದೆ ಉಳಿಸಿಕೊಳ್ಳಲು ಮಗುವನ್ನು ಕಾಲುವೆಗೆ ಎಸೆದ ದಂಪತಿ!

ಪ್ರಕರಣ
ಜೈಪುರ , ಗುರುವಾರ, 26 ಜನವರಿ 2023 (11:50 IST)
ಜೈಪುರ : ಸರ್ಕಾರಿ ಕೆಲಸವನ್ನು ಉಳಿಸಿಕೊಳ್ಳಲು ತಮ್ಮ ಪುಟ್ಟ ಕಂದಮ್ಮನನ್ನು ದಂಪತಿ ಕಾಲುವೆಗೆ ಎಸೆದ ಪ್ರಕರಣವೊಂದು ನಡೆದಿರುವ ಬಗ್ಗೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.
 
ಹೌದು. 5 ತಿಂಗಳ ಹೆಣ್ಣು ಮಗುವನ್ನು ಕಾಲುವೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಕಾಲುವೆಗೆ ಎಸೆದ ಪಾಪಿ ತಂದೆಯನ್ನು ಜವಾಹರ್ ಲಾಲ್ ಎಂದು ಗುರುತಿಸಲಾಗಿದೆ. ಈತ ಚಂದಾಸರ್ ಗ್ರಾಮದಲ್ಲಿ ಶಾಲಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದನು. 

ಕಳೆದ ವರ್ಷ ಡಿಸೆಂಬರ್ ನಲ್ಲಿ ತಾನು ನೀಡಿದ ದಾಖಲೆಯಲ್ಲಿ ಝನ್ವರ್ಲಾಲ್ ತಾನು ಇಬ್ಬರು ಮಕ್ಕಳನ್ನು ಹೊಂದಿರುವುದಾಗಿ ತಿಳಿಸಿದ್ದನು. ಆದರೆ ಇತ್ತೀಚೆಗೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ, ಆ ವ್ಯಕ್ತಿ ಕೆಲಸ ಕಳೆದುಕೊಳ್ಳುವ ಆತಂಕ ಆತನಿಗೆ ಎದುರಾಗಿತ್ತು.

ಬಿಕಾನೇರ್ ನ ಛತ್ತರ್ ಗಢದಲ್ಲಿ ಪುರುಷ ಮತ್ತು ಮಹಿಳೆಯೊಬ್ಬರು ಹೆಣ್ಣು ಮಗುವನ್ನು ಕಾಲುವೆಗೆ ಎಸೆದಿದ್ದಾರೆ ಎಂಬ ಮಾಹಿತಿಯನ್ನು ನಾವು ಪಡೆದುಕೊಂಡಿದ್ದೇವೆ. ನಂತರ ಮಗುವಿನ ದೇಹವನ್ನು ಪೊಲೀಸರು ವಶಪಡಿಸಿಕೊಂಡರು.

ಇದೀಗ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಈ ಇಬ್ಬರೂ ಮೃತ ಹೆಣ್ಣು ಮಗುವಿನ ಪೋಷಕರು ಎಂದು ತಿಳಿದುಬಂದಿದೆ ಎಂದು ಸರ್ಕಲ್ ಆಫೀಸರ್ ವಿನೋದ್ ಕುಮಾರ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೇಕಪ್ ಮಾಡಿಕೊಂಡು ಬಂದ ಪಕ್ಷಕ್ಕೆ ಜೆಡಿಎಸ್ ಬೆಂಬಲ : ಇಬ್ರಾಹಿಂ