Select Your Language

Notifications

webdunia
webdunia
webdunia
webdunia

ಮೇಕಪ್ ಮಾಡಿಕೊಂಡು ಬಂದ ಪಕ್ಷಕ್ಕೆ ಜೆಡಿಎಸ್ ಬೆಂಬಲ : ಇಬ್ರಾಹಿಂ

ಜೆಡಿಎಸ್
ಬೆಳಗಾವಿ : ಸಮ್ಮಿಶ್ರ ಸರ್ಕಾರದ ಪ್ರಸಂಗ ಬಂದರೆ ಒಳ್ಳೆಯ ಮೇಕಪ್ ಮಾಡಿಕೊಂಡು ಬಂದ ಪಕ್ಷಕ್ಕೆ ಜೆಡಿಎಸ್ ಬೆಂಬಲ ನೀಡಲಿದೆ ಎಂದು ಜನತಾದಳದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
 
ಚಿಕ್ಕೋಡಿ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ 2023 ರಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಒಂದು ವೇಳೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರದಿದ್ದರೆ ಸಮ್ಮಿಶ್ರ ಸರ್ಕಾರದ ಒಲವು ವ್ಯಕ್ತಪಡಿಸಿದರು. ಯಾರು ಒಳ್ಳೆಯ ಮೇಕಪ್ ಹಾಕಿಕೊಂಡು ಬರುತ್ತಾರೆ ನೋಡೋಣ ಎಂದಿದ್ದಾರೆ. 

ಕಾಂಗ್ರೆಸ್ ಉಚಿತ ವಿದ್ಯುತ್ ನೀಡುವ ಘೋಷಣೆ ವಿಚಾರದ ಕುರಿತು ಮಾತನಾಡಿ, ನೀರು ಕೊಡದವರು ಉಚಿತವಾಗಿ ಏನಾದರೂ ನೀಡುತ್ತಾರಾ..?, ಎಲ್ಲವೂ ಸುಳ್ಳು ಹೇಳುತ್ತಾರೆ, ಕುಮಾರಸ್ವಾಮಿ ಹೇಳಿದಂತೆ ನಡೆಯುತ್ತಾರೆ. ಹೇಳಿದಂತೆ ನಡೆಯುವುದು ಜೆಡಿಎಸ್ ಪಕ್ಷ. ನಾವು ಸ್ಪಷ್ಟವಾಗಿ ಬಹುಮತ ಪಕ್ಷವಾಗಿ ಬರುತ್ತೇವೆ. ನುಡಿದಂತೆ ನಾವು ನಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಶ್ಲಾಘನೀಯ ಸೇವಾ ಪದಕ