Select Your Language

Notifications

webdunia
webdunia
webdunia
webdunia

ಅಕ್ರಮ : ಯುವತಿ ಮಾತಿಗೆ ಸೊಪ್ಪು ಹಾಕದ ಪೊಲೀಸರು?

ಅಕ್ರಮ : ಯುವತಿ ಮಾತಿಗೆ ಸೊಪ್ಪು ಹಾಕದ ಪೊಲೀಸರು?
ಬೆಂಗಳೂರು , ಬುಧವಾರ, 25 ಜನವರಿ 2023 (10:38 IST)
ಬೆಂಗಳೂರು : ಯುವತಿ ಭಾರತ ಬಿಟ್ಟು ಹೋಗೋದಿಲ್ಲ ಅಂತ ಪಟ್ಟು ಹಿಡಿದಿದ್ದಾಳೆ. ಆದರೆ ಕಾನೂನಿನಲ್ಲಿ ಇದಕ್ಕೆಲ್ಲಾ ಅವಕಾಶ ಇಲ್ಲ. ಯುವತಿ ಒಲ್ಲೆ ಎಂದರೂ ಆಕೆಯನ್ನ ಡಿಪೋರ್ಟ್ ಮಾಡಲು ಬೇಕಾದ ಪ್ರಕ್ರಿಯೆ ನಡೆಸುತ್ತಾ ಇದ್ದಾರೆ.

ಸದ್ಯ ಪೊಲೀಸರು ಮತ್ತು ಎಫ್ಆರ್ ಆರ್ ಒ ಅಧಿಕಾರಿಗಳು ಯುವತಿ ಭಾರತಕ್ಕೆ ಬಂದಿರೋದೇ ಅಕ್ರಮವಾಗಿ, ಹೀಗಾಗಿ ಯುವತಿಯನ್ನ ಪಾಕಿಸ್ತಾನಕ್ಕೆ ಕಳಿಸಲು ಮುಂದಾಗಿದ್ದಾರೆ. 

ಕೇಂದ್ರ ಸರ್ಕಾರದ ಸಂಬಂಧಪಟ್ಟ ಏಜೆನ್ಸಿಗಳ ಜೊತೆ ಎಫ್ಆರ್ಆರ್ಓ ಸಂಪರ್ಕ ಮಾಡಿದ್ದಾರೆ. ಪಾಕ್ ಯುವತಿ ವಾಪಸ್ ಕಳಿಸಲು ಕನಿಷ್ಠ ಎರಡು ತಿಂಗಳ ಸಮಯ ಬೇಕಾಗುತ್ತೆ.

ಹೀಗಾಗಿ ಎರಡು ದೇಶಗಳ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಯುವತಿಯನ್ನ ವಾಪಸ್ ಕಳಿಸಬೇಕು. ಸದ್ಯ ಯುವತಿಯನ್ನ ಡಿಪೋರ್ಟ್ ಮಾಡಲು ಬೇಕಾದ ಕಾನೂನು ಪ್ರಕ್ರಿಯೆ ಪರಿಶೀಲನೆಯನ್ನು ಎಫ್ಆರ್ ಆರ್ ಓ ಮತ್ತು ಪೊಲೀಸರು ನಡೆಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸೌಧಕ್ಕೆ ಆಂಧ್ರ ಸರ್ಕಾರದ ಸಚಿವರ ನಿಯೋಗ ಭೇಟಿ