Select Your Language

Notifications

webdunia
webdunia
webdunia
webdunia

ಶಾಸಕರ ವಾಹನಕ್ಕೆ 'ಬ್ರೇಕ್' ಹಾಕಿದ ಸಂಚಾರಿ ಪೊಲೀಸರು

ಶಾಸಕರ ವಾಹನಕ್ಕೆ 'ಬ್ರೇಕ್' ಹಾಕಿದ ಸಂಚಾರಿ ಪೊಲೀಸರು
bangalore , ಗುರುವಾರ, 19 ಜನವರಿ 2023 (17:14 IST)
ನೋ‌ ಪಾರ್ಕಿಂಗ್  ಸ್ಥಳದಲ್ಲಿದ್ದ ಶಾಸಕರು ಎಂದು ಬೋರ್ಡ್ ಹಾಕಿರುವ ವಾಹನವನ್ನ ನಿಷೇಧಿತ ಸ್ಥಳದಲ್ಲಿ ಪಾರ್ಕ್ ಮಾಡಿದ್ದ ಹಿನ್ನೆಲೆ ವಾಹನವನ್ನ ಕ್ಲಾಂಪ್ ನಿಂದ ಸಿಬ್ಬಂದಿ ಲಾಕ್ ಮಾಡಿದಾರೆ.ಶಾಸಕರು MLA ಮೂಡಿಗೆರೆ ಎಂದು ಸ್ಟಿಕ್ಕರ್ ಇರುವ  ತಾರ್ ಜೀಪ್ ನ್ನ ಬಸವನಗುಡಿ ಬಿಎಂಎಸ್ ಕಾಲೇಜು ಬಳಿ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದ್ದರು.ಹೀಗಾಗಿ ಬಸವನಗುಡಿ ಸಂಚಾರಿ ಪೊಲೀಸರಿಂದ ಜೀಪ್ ನ ವೀಲ್ ಲಾಕ್ ಮಾಡಿದ್ದಾರೆ.ಆ ವಾಹನ ತಂದವರ್ಯಾರು ಎಂದು ಪರಿಶೀಲನೆ ನಡೆಸಿದ್ದಾರೆ.
 
ವೀದ್ಯಾಪೀಟ ಬಳಿಯ ಪೂರ್ಣಚಂದ್ರ ತೇಜಸ್ವಿ ರಸ್ತೆ ಮತ್ತು ಬಿಎಂಎಸ್ ಕಾಲೇಜು ಹಿಂಭಾಗದ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡಲಾಗಿದ್ದು,ರಸ್ತೆಯಲ್ಲಿ ನಿಲ್ಲಿಸಿದ್ದ ಒಟ್ಟು 8 ಕಾರುಗಳಿಗೆ ಕ್ಲಾಂಪ್ ಹಾಕಲಾಗಿದೆ.KA01MV63318 ಥಾರ್ ಜೀಪಿನ ಮೇಲೆ MLA ಬೋರ್ಡ್ ಇತ್ತು.ಬಿ.ಬಿ.ನಿಂಗಯ್ಯ,ಮೂಡಿಗೆರೆ ಶಾಸಕರು ಎಂದು ಬೋರ್ಡ್ ಇತ್ತು.ಸದ್ಯ ಆ ಬೋರ್ಡ್ ಅನ್ನು ಈಗ ತೆಗೆದುಹಾಕಲಾಗಿದೆ.8 ನೋ ಪಾರ್ಕಿಂಗ್ ನಲ್ಲಿದ್ದ ವಾಹನಗಳಿಗೆ ವ್ಹೀಲ್ ಕ್ಲಾಂಪ್ ಹಾಕಲಾಗಿದೆ.ಬಿಎಂಎಸ್ ಕಾಲೇಜು ವಿದ್ಯಾರ್ಥಿಗಳ ಕಾರು ಎನ್ನಲಾಗ್ತಿದೆ.ಸದ್ಯ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಆದರೆ ಬಿಬಿ ನಿಂಗಯ್ಯ ಹೆಸರಲ್ಲಿ ಶಾಸಕರ ಬೋರ್ಡ್ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಣಪ್ಪುರಂ ಫೈನಾನ್ಸ್ ಕಚೇರಿಯಲ್ಲಿ ಚಿನ್ನ ಕದ್ದಿದ್ದ ಮ್ಯಾನೇಜರ್ ಬಂಧನ..