Select Your Language

Notifications

webdunia
webdunia
webdunia
webdunia

ಎಂಥೆಂತ ಕಳ್ಳರು ಇರ್ತಾರೆ ಅಂದ್ರೆ ಅವ್ರ ಹುಚ್ಚಾಟ ಕಂಡು ಪೊಲೀಸ್ರೆ ಶಾಕ್...!

How many thieves are there and the police are shocked to see their whims
bangalore , ಗುರುವಾರ, 19 ಜನವರಿ 2023 (16:57 IST)
ಎಂಥೆಂತ ಕಳ್ಳರು ಇರ್ತಾರೆ ಅಂದ್ರೆ ಅವ್ರ ಹುಚ್ಚಾಟ ಕಂಡು ಪೊಲೀಸ್ರೆ ಕೆಲವೊಮ್ಮೆ ಶಾಕ್ ಆಗ್ತಾರೆ. ಎಲ್ರೂ ದೇವರಿಗೆ ದೇವರೆ ನಾವು ಮಾಡೋ‌ ಕೆಲಸ ಇಡೇರಲಿ ಅಂತ ಕೇಳಿಕೊಳ್ತಾರೆ. ಆದ್ರೆ ಇಲ್ಲೊಬ್ಬ ಕಳ್ಳ ಎಟಿಎಂನಲ್ಲಿ ಲಕ್ಷ ಲಕ್ಷ ಹಣ ಇರ್ಲಿ ಅಂತ ದೇವರ ಪ್ರಾರ್ಥನೆ ಮಾಡಿ ಎಟಿಎಂಗೆ ಕನ್ನ ಹಾಕಿದ್ದಾನೆ. ನಗರದಲ್ಲಿ ಎಟಿಎಂ ಭಕ್ತ ಪತ್ತೆಯಾಗಿದ್ದು, ಎಟಿಎಂ ನಲ್ಲಿಲಕ್ಷ ಲಕ್ಷ ಹಣ ಇರಲಿ ಜೊತೆಗೆ ಸೆಕ್ಯೂರಿಟಿ ಗಾರ್ಡ್ ಇರದಿರಲಿ ಅಂತ ಬೇಡಿಕೊಳ್ತಾನೆ.
 
ಪ್ರತಿ ಬಾರಿ  ಎಟಿಎಂ ಕಳ್ಳತನ ಮಾಡೋದಕ್ಕೆ ದೇವರ ಮೊರೆ ಹೋಗುವ ಎಟಿಎಂ ಭಕ್ತ ಎಟಿಎಂನ ಲಾಕರ್ ಓಪನ್ ಆಗುತ್ತಿದ್ದಂತೆ ಕೈ ಮುಗಿದು ದೇವರಲ್ಲಿ ಪ್ರಾರ್ಥನೆ ಮಾಡ್ತಾನೆ.ಕಳ್ಳನ ದೈವ ಭಕ್ತಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಮಾಕ್ಷಿಪಾಳ್ಯದ ಆಕ್ಸೀಸ್ ಬ್ಯಾಂಕ್ ಎಟಿಎಂ ನಲ್ಲಿ ಕದಿಯಲು ಬಂದಿದ್ದ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಪ್ರತಿ ಬಾರಿ ಕದಿಯಲು ಹೋದಾಗ ಹಣ ಸಿಕ್ಕಿರಲಿಲ್ಲ  ಹೀಗಾಗಿ  ನಿರಾಸೆಗೊಂಡಿದ್ದ ಕಳ್ಳ ಪ್ರತಿ ಬಾರಿ ಎಟಿಎಂ ದೋಚೋದಕ್ಕೆ ಮುಂಚೆ ಲಕ್ಷಾಂತರ ಹಣ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾನೆ.ಕಳ್ಳನ ಕೃತ್ಯದ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ  ದಾಖಲಾಗಿದ್ದು, ದೂರಿನ ಅನ್ವಯ ಆರೋಪಿ ಕರಿಚಿತ್ತಪ್ಪನ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಧುನಿಕ ಕ್ಯಾಥ್‌ಲ್ಯಾಬ್ ಉದ್ಘಾಟಿಸಿದ ಸಚಿವ ಡಾ. ಅಶ್ವತ್ಥ್‌ ನಾರಾಯಣ್