Select Your Language

Notifications

webdunia
webdunia
webdunia
webdunia

ಭರತನಾಟ್ಯ ಕಲೆ ದೇಶದ ಸಂಸ್ಕೃತಿ, ಸಂಪ್ರಾದಯದ ಪ್ರತೀಕ-ಯುವ ಭರತನಾಟ್ಯ ಕಲಾವಿದ ಜೆ.ಮನು

ಭರತನಾಟ್ಯ ಕಲೆ ದೇಶದ ಸಂಸ್ಕೃತಿ, ಸಂಪ್ರಾದಯದ ಪ್ರತೀಕ-ಯುವ ಭರತನಾಟ್ಯ ಕಲಾವಿದ ಜೆ.ಮನು
bangalore , ಗುರುವಾರ, 19 ಜನವರಿ 2023 (15:53 IST)
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಯುವ ಕಲಾವಿದ ಜೆ.ಮನುರವರು ಪ್ರಥಮ ಸ್ಥಾನಗಳಿಸಿ, ರಾಜ್ಯಕ್ಕೆ ಕೀರ್ತಿ ತಂದರು. ಇದೇ ಸಂದರ್ಭದಲ್ಲಿ ಯುವ ಕಲಾವಿದ ಜೆ.ಮನುರವರನ್ನು  ಶಾಸಕರಾದ ದಿನೇಶ್ ಗುಂಡೂರಾವ್ ರವರು,ಡಾ||ವೀಣಾ ಮೂರ್ತಿ ವಿಜಯ್ ರವರು  ಸನ್ಮಾನಿಸಿದರು.
 
ಯುವ ಭರತನಾಟ್ಯ ಕಲಾವಿದ ಜೆ.ಮನುರವರು ಮಾತನಾಡಿ ಶಿಷ್ಯ,ಗುರು ಪರಂಪರೆ ಮತ್ತು ದೇಶದ ಸಂಸ್ಕೃತಿ ಸಂಪ್ರಾದಯದ ಭರತನಾಟ್ಯ ಕಲೆ ಉಳಿಸಿ,ಬೆಳಸಲು 5ವರ್ಷದ ಬಾಲಕನಾಗಿದ್ದ ನಿಂದ ಅವಿರತ ಶ್ರಮ ಪಡುತ್ತಿದ್ದೇನೆ.ಭರತನಾಟ್ಯ,ಕೂಚುಪುಡಿ ನೃತ್ಯ ಭಾರತೀಯ ಶಿಷ್ಯ,ಪರಂಪರೆ ಸಾರುವ ಕಲೆಯಾಗಿದೆ.
 
ವಿಶ್ವದ ಎಲ್ಲ ದೇಶಗಳಲ್ಲಿ ಭರತನಾಟ್ಯ ಕಲೆ ವಿಶೇಷ, ಗೌರವ ಸ್ಥಾನಮಾನವಿದೆ.ಕಲೆ ಉುಳಿದರೆ ನಾಡಿನ ಇತಿಹಾಸ ತಿಳಿಯಬಹುದು ಅದರಿಂದ ಭರತನಾಟ್ಯ ಕಲೆಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಉಚಿತವಾಗಿ ಭರತನಾಟ್ಯ ತರಭೇತಿ ಶಿಬಿರ ಆಯೋಜಿಸಲಾಗುತ್ತಿದೆ.ಭರತನಾಟ್ಯ ಕಲೆ ಉಳಿಸಲು ಚೀನಾ, ಮಲೇಶಿಯ, ಸಿಂಗಪೂರ್, ನೇಪಾಳ, ಗೋವಾ, ಮಹಾರಾಷ್ಟ್ರ, ನವದೆಹಲಿ ವಿವಿಧ ರಾಜ್ಯಗಳಲ್ಲಿ ಯುವ ಜನೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ.
 
ರಾಜ್ಯ ಸರ್ಕಾರ ಭರತನಾಟ್ಯ ಕಲೆ ಉಳಿಸಲು ಯುವ ಕಲಾವಿದರಿಗೆ ಸಹಕಾರ,ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್