Select Your Language

Notifications

webdunia
webdunia
webdunia
webdunia

‘ಬಂಗಾರದ ಮನುಷ್ಯ’ ಚಿತ್ರಕ್ಕೆ 50 ವರ್ಷ

‘ಬಂಗಾರದ ಮನುಷ್ಯ’ ಚಿತ್ರಕ್ಕೆ 50 ವರ್ಷ
bangalore , ಗುರುವಾರ, 31 ಮಾರ್ಚ್ 2022 (21:05 IST)
ಡಾ. ರಾಜ್​ ರ ‘ಬಂಗಾರದ ಮನುಷ್ಯ’ ಚಿತ್ರ ತೆರೆಕಂಡು ಇಂದಿಗೆ 50 ವರ್ಷ ಪೂರೈಸಿದೆ. ಅರ್ಧ ಶತಮಾನ ಕಳೆದರೂ ಕೂಡ ಈ ಚಿತ್ರದ ಚಾರ್ಮ್​ ಕಡಿಮೆ ಆಗಿಲ್ಲ. ಇಂದಿಗೂ ಕೂಡ ಸಿನಿಪ್ರಿಯರ ಸಂವಾದದಲ್ಲಿ ‘ಬಂಗಾರದ ಮನುಷ್ಯ’ ಚಿತ್ರ ಪ್ರಸ್ತುತವಾಗಿ ಉಳಿದುಕೊಂಡಿದೆ. ‘ಬಂಗಾರದ ಮನುಷ್ಯ’ ಸಿನಿಮಾವನ್ನು ನಿರ್ದೇಶನ ಮಾಡಿದವರು ಎಸ್​. ಸಿದ್ದಲಿಂಗಯ್ಯ. ಟಿ.ಕೆ. ರಾಮರಾವ್​ ಬರೆದ ‘ಬಂಗಾರದ ಮನುಷ್ಯ’ ಕಾದಂಬರಿ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿತ್ತು. ರಾಜ್​ಕುಮಾರ್​, ಭಾರತಿ, ಬಾಲಕೃಷ್ಣ, ಶ್ರೀನಾಥ್​, ಲೋಕನಾಥ್​, ದ್ವಾರಕೀಶ್​, ವಜ್ರಮುನಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಹತ್ತು ಹಲವು ಕಾರಣಗಳಿಂದಾಗಿ ‘ಬಂಗಾರದ ಮನುಷ್ಯ’ ಚಿತ್ರ ಇಂದಿಗೂ ವಿಶೇಷ ಸ್ಥಾನ ಉಳಿಸಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೇಯ್ಟ್ ಲಿಫ್ಟಿಂಗ್​ನಲ್ಲಿ ಉಷಾಗೆ ಚಿನ್ನ