Publish Date: Thu, 31 Mar 2022 (10:38 IST)
Updated Date: Thu, 31 Mar 2022 (10:40 IST)
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಜೊತೆಯಾಗಿ ಆಡಿ ಕುಚಿಕು ಗೆಳೆಯರಾಗಿದ್ದ ವಿರಾಟ್ ಕೊಹ್ಲಿ ಬಗ್ಗೆ ಎಬಿಡಿ ವಿಲಿಯರ್ಸ್ ಮಾತನಾಡಿದ್ದಾರೆ.
ಇತ್ತೀಚೆಗೆ ಎಲ್ಲರೂ ಕೊಹ್ಲಿ ಫಾರ್ಮ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಕೊಹ್ಲಿ ಮೊದಲಿನಂತೆ ರನ್ ಗಳಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ನಿನ್ನೆಯ ಪಂದ್ಯದಲ್ಲೂ ಕೊಹ್ಲಿ ಕಳಪೆ ಮೊತ್ತಕ್ಕೆ ಔಟಾಗಿದ್ದರು.
ಈ ಬಗ್ಗೆ ಮಾತನಾಡಿರುವ ಎಬಿಡಿ ವಿಲಿಯರ್ಸ್, ಫಾ ಡು ಪ್ಲೆಸಿಸ್ ಆರ್ ಸಿಬಿ ನಾಯಕರಾಗಿರುವುದರಿಂದ ವಿರಾಟ್ ಕೊಹ್ಲಿ ಒತ್ತಡದಿಂದ ಮುಕ್ತರಾಗಿದ್ದಾರೆ. ಅವರೀಗ ನಿರಾಳವಾಗಿ ಬ್ಯಾಟಿಂಗ್ ನಡೆಸಬಹುದು. ಅವರ ಫಾರ್ಮ್ ಬಗ್ಗೆ ಅನುಮಾನ ಬೇಡ ಎಂದು ಎಬಿಡಿ ಹೇಳಿದ್ದಾರೆ.