Publish Date: Wed, 30 Mar 2022 (09:40 IST)
Updated Date: Wed, 30 Mar 2022 (10:00 IST)
ಮುಂಬೈ: ಐಪಿಎಲ್ ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಪಂದ್ಯವಾಡಲಿದೆ. ಕೆಕೆಆರ್ ತಂಡದ ವಿರುದ್ಧ ಇಂದಿನ ಪಂದ್ಯ ನಡೆಯಲಿದೆ.
ಎರಡೂ ತಂಡಗಳು ಈಗಾಗಲೇ ತಲಾ ಒಂದು ಪಂದ್ಯವಾಡಿದೆ. ಈ ಪೈಕಿ ಆರ್ ಸಿಬಿ ಮೊದಲ ಪಂದ್ಯದಲ್ಲಿ ಸೋತರೆ, ಕೆಕೆಆರ್ ಗೆಲುವು ಕಂಡಿತ್ತು.
ರಾಯಲ್ ಚಾಲೆಂಜರ್ಸ್ ತಂಡಕ್ಕೆ ಬೌಲರ್ ಗಳದ್ದೇ ತಲೆನೋವಾಗಿದೆ. ಕಳೆದ ಪಂದ್ಯದಲ್ಲಿ 200 ರ ಗಡಿ ದಾಟಿಯೂ ಬಿಗುವಿಲ್ಲದ ಬೌಲಿಂಗ್ ನಿಂದಾಗಿ ಸೋಲು ಅನುಭವಿಸಬೇಕಾಗಿ ಬಂತು. ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ನಂತಹ ಬಿಗ್ ಹಿಟ್ಟರ್ ಗಳನ್ನು ಕಟ್ಟಿಹಾಕಬೇಕಾದರೆ ಬೌಲಿಂಗ್ ಬಿಗಿಯಾಗಬೇಕು. ಮೊದಲ ಪಂದ್ಯ ಸೋತಿರುವ ಆರ್ ಸಿಬಿ ಇಂದಾದರೂ ಗೆಲುವು ಕಾಣುತ್ತಾ ಕಾದು ನೋಡಬೇಕು. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.