Select Your Language

Notifications

webdunia
webdunia
webdunia
webdunia

ಉದ್ಯೋಗಿಗಳಿಗೆ ಫಿಟ್ನೆಸ್ ಚ್ಯಾಲೆಂಜ್ ಹಾಕಿದ ಸಿಇಒ

ಉದ್ಯೋಗಿಗಳಿಗೆ ಫಿಟ್ನೆಸ್ ಚ್ಯಾಲೆಂಜ್ ಹಾಕಿದ ಸಿಇಒ
ನವದೆಹಲಿ , ಸೋಮವಾರ, 26 ಸೆಪ್ಟಂಬರ್ 2022 (11:55 IST)
ನವದೆಹಲಿ : ತೂಕ ಇಳಿಸಿಕೊಳ್ಳಿ ಹಾಗೂ 10 ಲಕ್ಷ ರೂ. ಯನ್ನು ಬಹುಮಾನವಾಗಿ ಗೆಲ್ಲಿ! ಹೀಗೊಂದು ಫಿಟ್ನೆಸ್ ಚ್ಯಾಲೆಂಜ್ ಅನ್ನು ಕಂಪನಿಯೊಂದರ ಸಿಇಒ ತನ್ನ ಉದ್ಯೋಗಿಗಳಿಗೆ ನೀಡಿದ್ದಾರೆ.

ಹೌದು, ಆನ್ಲೈನ್ ಬ್ರೋಕರೇಜ್ ಕಂಪನಿ Zerodha ತನ್ನ ಉದ್ಯೋಗಿಗಳಿಗೆ ಹೊಸ ಫಿಟ್ನೆಸ್ ಸವಾಲನ್ನು ನೀಡಿದೆ. ಕಂಪನಿಯ ಸಿಇಒ ನಿತಿನ್ ಕಾಮತ್, ಈ ಸವಾಲನ್ನು ಪೂರ್ಣಗೊಳಿಸುವುದರಿಂದ ಉದ್ಯೋಗಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಮಾತ್ರವಲ್ಲದೇ ಒಬ್ಬ ಅದೃಷ್ಟಶಾಲಿ ಉದ್ಯೋಗಿ 10 ಲಕ್ಷ ರೂ. ಬಹುಮಾನವನ್ನು ಗೆಲ್ಲಬಹುದು ಎಂದಿದ್ದಾರೆ.

ತಮ್ಮ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ಸಂದರ್ಭದಲ್ಲಿ ಹೆಚ್ಚು ಸಕ್ರಿಯರಾಗಿರುವಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯ ಹೆಚ್ಚಿನ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದು, ಇದರಿಂದ ಅವರು ಹೆಚ್ಚು ಸಕ್ರಿಯರಾಗದೇ ಇರಲು ಕಾರಣವಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸ್ಥಾನಕ್ಕೆ ರಾಜೀನಾಮೆ ಸುಳಿವು ನೀಡಿದ ಗೆಹ್ಲೋಟ್