Publish Date: Mon, 26 Sep 2022 (11:09 IST)
Updated Date: Mon, 26 Sep 2022 (11:12 IST)
ಜೈಪುರ : ರಾಜ್ಯದಲ್ಲಿ ಪಕ್ಷ ಹಾಗೂ ಸರ್ಕಾರವನ್ನು ಮುನ್ನಡೆಸಲು ಹೊಸ ಪೀಳಿಗೆಗೆ ಅವಕಾಶ ನೀಡಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಆ ಮೂಲಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ. ಜೈಪುರದಲ್ಲಿ ಭಾನುವಾರ ನಡೆಯಲಿರುವ ನಿರ್ಣಾಯಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮುನ್ನ ಮಾತನಾಡಿದ ಅವರು,
ನಾನು NSUI ಯಿಂದ ಕಳೆದ 50 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. 40 ವರ್ಷಗಳಿಂದ ಕೆಲವು ಸಾಂವಿಧಾನಿಕ ಹುದ್ದೆಯಲ್ಲಿದ್ದೇನೆ. ಒಬ್ಬ ವ್ಯಕ್ತಿಯು ಇನ್ನೇನು ಕೇಳಬಹುದು? ನಾನು ಮೂರು ಬಾರಿ ಸಿಎಂ, ಶಾಸಕ, ಸಂಸದ, ಕೇಂದ್ರ ಸಚಿವ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥನಾಗಿದ್ದೇನೆ ಎಂದು ತಿಳಿಸಿದ್ದಾರೆ.