Select Your Language

Notifications

webdunia
webdunia
webdunia
Saturday, 5 April 2025
webdunia

ಕುಡಿದ ನಶೆಯಲ್ಲಿ ಪ್ರಾಣಿ ಬಲಿ ಹೋಗಿ, ನರ ಬಲಿ ಕೊಟ್ಟ!

ಆಂಧ್ರಪ್ರದೇಶ
ಕೋಲಾರ , ಗುರುವಾರ, 20 ಜನವರಿ 2022 (09:06 IST)
ಕೋಲಾರ : ದೇವರಿಗೆ ಪ್ರಾಣಿ ಬಲಿ ಕೊಡುವಾಗ ಯಡವಟ್ಟು ಮಾಡಿರುವ ಕುಡುಕನೊಬ್ಬ ಮೇಕೆ ತಲೆ ಕಡಿಯುವ ಬದಲಿಗೆ ಯುವಕನ ಕತ್ತು ಕತ್ತರಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
 
ಕೋಲಾರದ ಗಡಿ ಅಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಲಸನಪಲ್ಲಿಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಸುರೇಶ್ (32) ಬಲಿಪಶುವಾದ ಯುವಕ. ಮೇಕೆ ಹಿಡಿದುಕೊಂಡಿದ್ದ ಸ್ನೇಹಿತನ ಕತ್ತು ಕತ್ತರಿಸಿರುವ ಕುಡುಕ ಚಲಪತಿ, ಪೊಲೀಸರ ಅತಿಥಿಯಾಗಿದ್ದಾನೆ. ಈತ ಕುಡಿದ ಮತ್ತಿನಲ್ಲಿ ಮೇಕೆ ತಲೆ ಬದಲಿಗೆ ತನ್ನ ಸ್ನೇಹಿತನ ತಲೆಯನ್ನೇ ಕತ್ತರಿಸಿದ್ದಾನೆ.

ಮೇಕೆ ಹಿಡಿದುಕೊಂಡಿದ್ದ ಸುರೇಶ್ ತಲೆಯನ್ನು ಕತ್ತರಿಸಿರುವ ಚಲಪತಿ, ಗ್ರಾಮಾಂತರ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಂಠಪೂರ್ತಿ ಕುಡಿದರು, ಕೊನೆಗೆ ಬಿಲ್ ಕೇಳಲು ಬಂದಾಗ ಹೀಗಾ ಮಾಡೋದು?!