Select Your Language

Notifications

webdunia
webdunia
webdunia
webdunia

ಪುತ್ರಿಯ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ ಆರೋಪಿ ಬಂಧನ

father
kolkatta , ಮಂಗಳವಾರ, 28 ನವೆಂಬರ್ 2023 (13:32 IST)
ಪುತ್ರಿ ಶಾಲೆಗೆ ಹೋಗದಂತೆ ತಡೆದ ಕಾಮುಕ ತಂದೆಯೊಬ್ಬ, ಆಕೆಯ ಮೇಲೆ ನಿರಂತರ ಅತ್ಯಾಚಾರವೆಸಗಿರುವುದು ಬಹಿರಂಗವಾದ ನಂತರ ನೆರೆಹೊರೆಯವರು ಆರೋಪಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 8 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಆಕೆಯ ಮೇಲೆ ಅತ್ಯಾಚಾರವಾಗಿರುವುದು ದೃಢಪಡಿಸಿದ್ದಾರೆ.
 
ಅತ್ಯಾಚಾರಿಗಳಿಗೆ ಕೋರ್ಟ್  ಶಿಕ್ಷೆ ವಿಧಿಸುತ್ತಿದ್ದರೂ ಆರೋಪಿಗಳು ಕ್ಯಾರೆ ಎನ್ನುತ್ತಿಲ್ಲ. ಕಳೆದ ಒಂದು ವರ್ಷದ ಅವಧಿಯಲ್ಲಿ 15 ವರ್ಷ ವಯಸ್ಸಿನ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ 38 ವರ್ಷ ವಯಸ್ಸಿನ ಕಾಮುಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
 
ಅತ್ಯಾಚಾರಕ್ಕೊಳಗಾದ ಬಾಲಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ನಿರುದ್ಯೋಗಿಯಾಗಿದ್ದ ನನ್ನ ತಂದೆ ನಿರಂತರ ಲೈಂಗಿಕ ಕಿರುಕುಳ ನೀಡಿದ್ದಾನೆ. ತಾಯಿ ಮನೆಯಿಂದ ಹೊರಗಡೆ ಕೆಲಸದ ನಿಮಿತ್ತ ತೆರಳಿದ್ದಾಗ ಅತ್ಯಾಚಾರವೆಸಗುತ್ತಿದ್ದನು. ಕುಟುಂಬದ ಮರ್ಯಾದೆ ಹಾಳಾಗಬಾರದು ಎನ್ನುವ ಉದ್ದೇಶದಿಂದ ಮೌನವಾಗಿದ್ದೆ ಎಂದು ದೂರಿನಲ್ಲಿ ವಿವರಣೆ ನೀಡಿದ್ದಾಳೆ.
 
ತಂದೆ ನನ್ನ ಮೇಲೆ ಮೂರನೇ ಬಾರಿ ಅತ್ಯಾಚಾರವೆಸಗಿದಾಗ ಗೆಳತಿಯ ಮನೆಗೆ ತೆರಳಿದ್ದೆ. ಅಲ್ಲಿ ಅನಾರೋಗ್ಯ ಕಾಡಿದ್ದರಿಂದ ನನ್ನ ಗೆಳತಿಗೆ ಘಟನೆಯ ವಿವರ ನೀಡಿದೆ. ಗೆಳತಿ ತನ್ನ ಸಂಬಂಧಿಕರಿಗೆ ತಿಳಿಸಿದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲ್‌ಗರ್ಲ್‌ಗಳ ಜೊತೆ ಸಿಕ್ಕಿ ಬಿದ್ದ ಶಾಸಕ: ರಾಜಕೀಯ ಕೋಲಾಹಲ