Select Your Language

Notifications

webdunia
webdunia
webdunia
Saturday, 12 April 2025
webdunia

ಬಿಜೆಪಿ ನಾಯಕ ಶೇಖ್ ವಾಸಿಮ್ ರನ್ನು ಹತ್ಯೆಗೈದ ಭಯೋತ್ಪಾದಕರು

ಶ್ರೀನಗರ
ಶ್ರೀನಗರ , ಗುರುವಾರ, 9 ಜುಲೈ 2020 (07:52 IST)
Normal 0 false false false EN-US X-NONE X-NONE

ಶ್ರೀನಗರ : ಜಮ್ಮು ಕಾಶ್ಮೀರದ ಬಿಜೆಪಿ ನಾಯಕ ಶೇಖ್ ವಾಸಿಮ್ ಮತ್ತು ಅವರ ಕುಟುಂಬದವರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬುಧವಾರ ಸಂಜೆ ಬಡಿಪೋರಾ ಜಿಲ್ಲಯಲ್ಲಿ ನಡೆದಿದೆ.
 

ಬಿಜೆಪಿ ನಾಯಕ ಶೇಖ್ ವಾಸಿಮ್ ಹಾಗೂ ಅವರ ತಂದೆ ಮತ್ತು ಸಹೋದರ ಅಂಗಡಿಯೊಂದರಲ್ಲಿ ಕುಳಿತಿದ್ದ ವೇಳೆ ದಾಳಿ ಮಾಡಿದ ಭಯೋತ್ಪಾದಕರು ಅವರ ಮೇಲೆ ಗುಂಡಿನ ಮಳೆ ಸುರಿದಿದ್ದಾರೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ತೀವ್ರ ರಕ್ತಸ್ರಾವದಿಂದ ಮೂವರು ಮೃತಪಟ್ಟಿದ್ದಾರೆ.

ಬಿಜೆಪಿ ನಾಯಕ ಶೇಖ್ ವಾಸಿಮ್ ಅವರ ಭದ್ರತೆಗೆ ಸೆಕ್ಯೂರಿಟಿಗಳನ್ನು ನೇಮಿಸಲಾಗಿತ್ತು. ಆದರೆ ಘಟನೆ ನಡೆಯುವಾಗ ಒಬ್ಬ ಸೆಕ್ಯೂರಿಟಿ ಕೂಡ ಆ ಸ್ಥಳದಲ್ಲಿರದೆ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎನ್ನಲಾಗಿದೆ. ಈ ಕಾರಣದಿಂದ ವಾಸಿಮ್ ಅವರ ಸೆಕ್ಯೂರಿಟಿಗಳನ್ನು ಬಂಧಿಸಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ನೆಹರು ಕುಟುಂಬದ ಟ್ರಸ್ಟ್ ಗಳ ತನಿಖೆಗೆ ಮುಂದಾದ ಗೃಹ ಇಲಾಖೆ