Select Your Language

Notifications

webdunia
webdunia
webdunia
webdunia

ನೆಹರು ಕುಟುಂಬದ ಟ್ರಸ್ಟ್ ಗಳ ತನಿಖೆಗೆ ಮುಂದಾದ ಗೃಹ ಇಲಾಖೆ

ನೆಹರು ಕುಟುಂಬದ ಟ್ರಸ್ಟ್ ಗಳ ತನಿಖೆಗೆ ಮುಂದಾದ ಗೃಹ ಇಲಾಖೆ
ನವದೆಹಲಿ , ಗುರುವಾರ, 9 ಜುಲೈ 2020 (07:47 IST)
ನವದೆಹಲಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂ‍ಧಿಗೆ ಸಂಕಷ್ಟವೊಂದು  ಎದುರಾಗಿದ್ದು, ನೆಹರು ಕುಟುಂಬದ ಟ್ರಸ್ಟ್ ಗಳ ತನಿಖೆ ಮಾಡಲು ಗೃಹ ಇಲಾಖೆ ಅಂತರ ಸಚಿವಾಲಯ ಸಮಿತಿ ರಚಿಸಿದೆ.

ನೆಹರು ಕುಟುಂಬದ ಟ್ರಸ್ಟ್ ಗಳಿಂದ ಕಾನೂನು ಉಲ್ಲಂಘನೆ ಆರೋಪ ಕೇಳಿಬಂದ ಹಿನ್ನಲೆಯಯಲ್ಲಿ ಗೃಹ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಜಾರಿ ನಿರ್ದೇಶನಾಲಯ, ಸಿಬಿಐನ ವಿಶೇಷ ನಿರ್ದೇಶಕರ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗಿದೆ.
ರಾಜೀವ್ ಗಾಂಧಿ ಪ್ರತಿಷ್ಠಾನ, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಮತ್ತು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ನ ವ್ಯವಹಾರಗಳ ಬಗ್ಗೆ ಈ ಸಮಿತಿ ತನಿಖೆ ನಡೆಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಬಳ ಕೇಳಿದ್ದಕ್ಕೆ ನಾಯಿ ಬಿಟ್ಟು ಮಹಿಳೆಗೆ ಕಚ್ಚಿಸಿದ ಮಾಲೀಕ