Publish Date: Thu, 02 Jul 2020 (19:25 IST)
Updated Date: Thu, 02 Jul 2020 (19:26 IST)
ನಾನು ತಹಸೀಲ್ದಾರ್ ಇದ್ದೇನೆ. ಇಷ್ಟು ಹಣ ಕೊಟ್ಟರೆ ನಿಮ್ಮ ಕೆಲಸ ಮಾಡುವೆ ಎಂದು ಜನರನ್ನು ಯಾಮಾರಿಸೋಕೆ ಹೋದ ವಂಚಕರು ಸಿಕ್ಕಿ ಬಿದ್ದಿದ್ದಾರೆ.
ಜಮೀನು ದಾಖಲೆ ವಿಷಯದಲ್ಲಿ 1 ಲಕ್ಷ 25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ನಕಲಿ ತಹಸೀಲ್ದಾರ್ ಹಾಗೂ ಬ್ರೋಕರ್ ನನ್ನು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧನ ಮಾಡಿದ್ದಾರೆ.
ತಹಸೀಲ್ದಾರ್ ಎಂದು ಹೇಳಿ ಕರೆ ಮಾಡಿದ್ದ ನಕಲಿ ವ್ಯಕ್ತಿ ಶಿವಕುಮಾರ್ ಹಾಗೂ ರುದ್ರಸ್ವಾಮಿ ಎನ್ನುವವರು ಬಂಧನಕ್ಕೆ ಒಳಗಾಗಿದ್ದಾರೆ.
ತುಮಕೂರು ನಗರದಲ್ಲಿ ಲಂಚ ಸ್ವೀಕರಿಸುವಾಗಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.