Publish Date: Sun, 24 May 2020 (20:14 IST)
Updated Date: Sun, 24 May 2020 (20:30 IST)
ಕೊರೊನಾ ವಿರುದ್ಧದ ಹೋರಾಟಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ. ಆದರೆ ಮಾಸ್ಕ್ ಧರಿಸೋದನ್ನು ತಹಸೀಲ್ದಾರ್ ವೊಬ್ಬರು ಪಾಲನೆ ಮಾಡಿಲ್ಲ.
ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಹಸೀಲ್ದಾರ್ ರಾಜೀವ್ ಹಾಗೂ ಎಫ್ ಡಿಎ ಪ್ರದೀಪ್ ಗೆ ದಂಡ ವಿಧಿಸಲಾಗಿದೆ.
ಪಾಲಿಕೆ ಆರೋಗ್ಯ ನಿರೀಕ್ಷಕರು ಮಾಸ್ಕ್ ಧರಿಸದೇ ಅಡ್ಡಾಡುತ್ತಿದ್ದವರನ್ನು ಹಿಡಿದು ದಂಡ ವಿಧಿಸುತ್ತಿದ್ದರು. ಈ ವೇಳೆ ತಹಸೀಲ್ದಾರ್ ಹಾಗೂ ಎಫ್ ಡಿಎ ಮಾಸ್ಕ್ ಧರಿಸದ ಕಾರಣಕ್ಕಾಗಿ ದಂಡ ಪಾವತಿಸಿದ್ದಾರೆ.