Select Your Language

Notifications

webdunia
webdunia
webdunia
webdunia

ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಭೀಕರ ಕೊಲೆ..!

ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಭೀಕರ ಕೊಲೆ..!
ಘಾಜಿಯಾಬಾದ್‌ , ಶನಿವಾರ, 28 ಅಕ್ಟೋಬರ್ 2023 (20:00 IST)
ಘಾಜಿಯಾಬಾದ್‌ನಲ್ಲಿ ಬೀದಿ ನಾಯಿ ಮೇಲೆ ಎರಡೆರಡು ಬಾರಿ ಕಾರು ಹತ್ತಿಸಿ ಹತ್ಯೆ ಮಾಡಿದ ಘಟನೆ ನಡೆದಿದೆ. 
 
ಬೀದಿನಾಯಿಗಳ ಹಾವಳಿ ಘಾಜಿಯಾಬಾದ್‌ನಲ್ಲಿ ಹೆಚ್ಚಾಗಿದ್ದು,ಬೀದಿನಾಯಿಗಳ ಹಾವಳಿಯಿಂದ ಜನ ಭಯಬೀತಗೊಂಡಿದ್ದಾರೆ.ಮತ್ತೊಂದು ಕಡೆ ಬೀದಿನಾಯಿಗೆ ಉದ್ದೇಶಪೂರ್ವಕವಾಗಿ ಹಿಂಸೆ ಕೊಡಲಾಗಿದೆ.
 
M4U ಸಿನಿಮಾ ಹಾಲ್ ಬಳಿ ತನ್ನ ಪಾಡಿಗೆ ತಾನು ಕುಳಿತಿದ್ದ ಬೀದಿ ನಾಯಿ ಮೇಲೆ ಚಾಲಕ ಉದ್ದೇಶಪೂರ್ವಕವಾಗಿ ಕಾರು ಹರಿಸಿದ್ದಾನೆ. ಇಷ್ಟೇ ಅಲ್ಲ ಮುಂದೆ ಸಾಗಿದ ಕಾರು ಮತ್ತೆ ರಿವರ್ಸ್ ಬಂದು ಮತ್ತೊಂದು ಬಾರಿ ನಾಯಿ ಮೇಲೆ ಕಾರು ಹತ್ತಿಸಿ ಭೀಕರವಾಗಿ ನಾಯಿಯನ್ನು ಕೊಲ್ಲಲಾಗಿದೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಲಿಯುಗುರು ಒಂದು ಸದಾರಮೆ ನಾಟಕ-ಸಿ.ಟಿ.ರವಿ