Publish Date: Sat, 28 Oct 2023 (16:20 IST)
Updated Date: Sat, 28 Oct 2023 (16:53 IST)
ನಗರದಲ್ಲಿ ಮೊಬೈಲ್ ಗಳ ಕಳ್ಳತನ ಮಾಡುವ ಕಳ್ಳರ ಸಂಖ್ಯೆ ನಿತ್ಯ ಹೆಚ್ಚಾಗ್ತಿದೆ.ಬಸ್ ಗಳಲ್ಲಿ ಹೋಗಬೇಕಾದ್ರೆ ಕ್ಷಣ ಮಾತ್ರದಲ್ಲಿ ಮೊಬೈಲ್ ಗಳನ್ನ ಕಳ್ಳತನ ಮಾಡ್ತಾರೆ.
ಈಗ ಕೊನೆಗೂ ಗೋರಿಪಾಳ್ಯ ಕುಖ್ಯಾತ ಮೊಬೈಲ್ ಕಳ್ಳರು ಬನ್ನೇರುಘಟ್ಟ ಪೊಲೀಸರ ಬಲೆಗೆ ಬಿದ್ದಾರೆ. ಅಚ್ಚರಿ ಅನ್ನುವಂತೆ ಕಳ್ಳರಿಂದ ಬರೋಬ್ಬರಿ 1037 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.
ಗೋರಿಪಾಳ್ಯದ ಮಹಮ್ಮದ್ ಮಮೂದ್ ಪಾಷಾ, ಮಹಮ್ಮದ್ ಉಮರ್, ಹಾಗೂ ಐಯಾನ್ ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ 50 ಲಕ್ಷ ಮೌಲ್ಯದ ವಿವಿಧ ಬ್ರ್ಯಾಂಡ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.