Select Your Language

Notifications

webdunia
webdunia
webdunia
Thursday, 10 April 2025
webdunia

ಹುಲಿಯುಗುರು ಒಂದು ಸದಾರಮೆ ನಾಟಕ-ಸಿ.ಟಿ.ರವಿ

Huliyuguru
bangalore , ಶನಿವಾರ, 28 ಅಕ್ಟೋಬರ್ 2023 (18:48 IST)
ರಾಜ್ಯದಲ್ಲಿ ಹುಲಿ ಉಗುರಿನ ಬೇಟಿ ಅರಣ್ಯ ಅಧಿಕಾರಿಗಳು ಉಳ್ಳವರನ್ನು ಅಧಿಕಾರದಲ್ಲಿರುವವರನ್ನು  ಏನು ಮಾಡದೆ ಅವರಿಂದ ಹುಲಿ ಉಗುರನ್ನು ವಶಕ್ಕೆ ಪಡೆದು ನೋಟಿಸ್ ನೀಡಿ ತೆರಳುತ್ತಿದ್ದಾರೆ.
 
 ಆದರೆ ಸಾಮಾನ್ಯ ಜನರಿಗೆ ಯಾವುದೇ ಮುನ್ಸೂಚನೆ ನೋಟಿಸ್ ನೀಡದೆ ಬಂಧಿಸಿ ಅಮಾಯಕರನ್ನು ಜೈಲಿಗೆ ಕಳಿಸುತ್ತಿದ್ದಾರೆ ಅಂತಾ ಕೇಳಿದ್ದಕ್ಕೆ ಯಾವುದೇ ತಾರತಮ್ಯವಿಲ್ಲ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ  ಮುಂದೆ ಎಲ್ಲವು ಸರಿ ಹೋಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹಾರಿಕೆ ಉತ್ತರ ನೀಡಿದ್ದಾರೆ.
 
ಇತ್ತಾ ಇತ್ತೀಚಿಗೆ ನಡೆದ ಐಟಿ ದಾಳಿ, ಅಲ್ಲಿ ಪತ್ತೆಯಾದ ಅಕ್ರಮ ಹಣದ ಕುರಿತಾದ ಚರ್ಚೆಯನ್ನು ದಾರಿತಪ್ಪಿಸಿ, ಸಾರ್ವಜನಿಕರ ಆಕ್ರೋಶಕ್ಕೆ ಪೂರ್ಣ ವಿರಾಮ ನೀಡುವ ನಿಟ್ಟಿನಲ್ಲಿ CM ಮತ್ತು DCM ಆರಂಭಿಸಿರುವ ಹೊಸ ನಾಟಕ "ಹುಲಿಯುಗುರು" ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದ್ದಾರೆ. 
 
ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹುಲಿ ಉಗುರು ಕುರಿತು ಪೋಸ್ಟ್‌ ಮಾಡಿರುವ ಸಿ.ಟಿ. ರವಿ, ನೂರಾರು ವರ್ಷಗಳಿಂದ ಹುಲಿಯುಗುರನ್ನು ಬಹಳ ಜನ ರಾಜ್ಯಾದಾದ್ಯಂತ ಆಭರಣವಾಗಿ ಧರಿಸುತ್ತಿದ್ದದ್ದು ಹೊಸದೂ ಅಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಧುನಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಾಥ್: ಮೋದಿ