ನವಂಬರ್ 18 ಕ್ಕೆ ಪ್ರಮಾಣವಚನ ಮಾಡ್ತೀನಿ ಎಂದಿದ್ದ ತೇಜಸ್ವಿ ಯಾದವ್ ಗೆ ಸೋಲಾಗಲು ತಂದೆಯೇ ಕಾರಣನಾ

Krishnaveni K
ಶುಕ್ರವಾರ, 14 ನವೆಂಬರ್ 2025 (14:30 IST)
Photo Credit: X
ಪಾಟ್ನಾ: ನವಂಬರ್ 14 ಕ್ಕೆ ಮಹಾಘಟಬಂಧನಕ್ಕೆ ಬಹುಮತ ಬರುತ್ತದೆ, ನವಂಬರ್ 18 ಕ್ಕೆ ಬಿಹಾರದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದಿದ್ದ ತೇಜಸ್ವಿ ಯಾದವ್ ಹೀನಾಯವಾಗಿ ಸೋತಿದ್ದಕ್ಕೆ ಕಾರಣ ಅವರ ತಂದೆ ಲಾಲೂ ಪ್ರಸಾದ್ ಯಾದವ್ ಅವರಾ? ಹೀಗೊಂದು ವಿಶ್ಲೇಷಣೆ  ಜನ ನಡೆಸುತ್ತಿದ್ದಾರೆ.

ಬಿಹಾರದಲ್ಲಿ ಆರ್ ಜೆಡಿ ನೇತೃತ್ವದ ಮಹಾಘಟಬಂಧನ ಕೂಟ ಹೀನಾಯ ಸೋಲಿನತ್ತ ಮುಖ ಮಾಡಿದೆ. ಮುಖ್ಯಮಂತ್ರಿಯಾಗುವ ತೇಜಸ್ವಿ ಯಾದವ್ ಕನಸು ಭಗ್ನವಾಗಿದೆ. ಇದರೊಂದಿಗೆ ಸೋಲಿಗೆ ಕಾರಣಗಳನ್ನು ಹುಡುಕಲಾಗುತ್ತಿದೆ.

ಬಿಹಾರದಲ್ಲಿ ಈ ಬಾರಿ ಎನ್ ಡಿಎ ಕೂಟ ಭರ್ಜರಿ ಬಹುಮತ ಪಡೆದಿರುವುದಕ್ಕೆ ಮುಖ್ಯ ಎರಡು ಕಾರಣಗಳೆಂದರೆ ಮಹಿಳಾ ಮತದಾರರು ಕೈ ಹಿಡಿದಿದ್ದು ಮತ್ತು ಮುಸ್ಲಿಂ ಮತಗಳೂ ಜೆಡಿಯುಗೆ ಬಂದಿದ್ದು ಎನ್ನಲಾಗುತ್ತಿದೆ.

ಇತ್ತ ಆರ್ ಜೆಡಿ ಈ ಹಿಂದೆ ನಡೆಸಿದ್ದ ಜಂಗಲ್ ರಾಜ್ ಆಡಳಿತವನ್ನು ಜನ ಇನ್ನೂ ಮರೆತಿಲ್ಲ. ಲಾಲೂ ಪ್ರಸಾದ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗ ಬಿಹಾರ ಯಾವ ಸ್ಥಿತಿಯಲ್ಲಿತ್ತು ಎನ್ನುವುದನ್ನು ಜನ ಮರೆಯುವಂತೇ ಇಲ್ಲ. ಬಿಹಾರ ಎಂದರೆ ಗೂಂಡಾ ರಾಜ್ಯ ಎನ್ನುವ ಸ್ಥಿತಿಯಲ್ಲಿತ್ತು. ಅಂದು ಲಾಲೂ ಉತ್ತಮ ಆಡಳಿತ ನೀಡುತ್ತಿದ್ದರೆ ಜನ ಇಂದು ಆರ್ ಜೆಡಿಗೆ ವೋಟ್ ಹಾಕುತ್ತಿದ್ದರು ಎನ್ನುವುದು ಜನರ ಅಭಿಪ್ರಾಯವಾಗಿದೆ. ಹೀಗಾಗಿ ತೇಜಸ್ವಿ ಯಾದವ್ ಎಷ್ಟೇ ಬೊಬ್ಬಿರಿದರೂ ಆರ್ ಜೆಡಿಯ ಕುಟುಂಬ ರಾಜಕಾರಣವನ್ನು ಬಿಹಾರದ ಜನತೆ ಒಪ್ಪಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೇ ಮತ್ತೆ ನಿತೀಶ್ ಕುಮಾರ್ ಗೆ ಮಣೆ ಹಾಕಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಪ್ರಕರಣ, ಮತ್ತೆ ತೆರೆದ ಲಾಲ್ ಕ್ವಿಲಾ ಮೆಟ್ಟೋ ನಿಲ್ದಾಣ

ಬಿಹಾರ ಮಹಾಘಟಬಂಧನ್‌ಗೆ ಹೀನಾಯ ಸೋಲು, ಲಾಲು ಕುಟುಂಬದಲ್ಲಿ ಭಾರೀ ಬೆಳವಣಿಗೆ

ಶಬರಿಮಲೆ ಯಾತ್ರೆ ಶುರು, ದರ್ಶನಕ್ಕೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

ಬಿಹಾರ ಫಲಿತಾಂಶ ಬೆನ್ನಲ್ಲೇ ರಾಹುಲ್ ಗಾಂಧಿಯನ್ನು ಭೇಟಿಯಾದ ಸಿದ್ದರಾಮಯ್ಯ

ಕೇಳಿದಾಗ ಮೊಬೈಲ್ ಕೊಡಿಸಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ

ಮುಂದಿನ ಸುದ್ದಿ
Show comments