Select Your Language

Notifications

webdunia
webdunia
webdunia
webdunia

ಹೊಸ ವ್ಯವಸ್ಥೆಯೆಡೆಗೆ ಟಾಟಾ ಗ್ರೂಪ್?

ಹೊಸ ವ್ಯವಸ್ಥೆಯೆಡೆಗೆ ಟಾಟಾ ಗ್ರೂಪ್?
ಮುಂಬೈ , ಶನಿವಾರ, 23 ಜುಲೈ 2022 (07:50 IST)
ಮುಂಬೈ : ಟಾಟಾ ಗ್ರೂಪ್ ಏರ್ ಇಂಡಿಯಾವನ್ನು ಮರಳಿ ಸ್ವಾಧೀನಪಡಿಸುತ್ತಿದ್ದಂತೆಯೇ ತನ್ನ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ(ವಿಆರ್ಎಸ್)ಯನ್ನು ಪರಿಚಯಿಸಿದೆ.
 
ಹೊಸ ಪ್ರತಿಭೆಗಳನ್ನು ಕಂಪನಿಗೆ ಆಹ್ವಾನಿಸುವ ಸಲುವಾಗಿ ಟಾಟಾ ಗ್ರೂಪ್ ಈ ಯೋಜನೆಯನ್ನು ಮಾಡಿದ್ದು, ಇದರ ಅಡಿಯಲ್ಲಿ 4,500 ಉದ್ಯೋಗಿಗಳು ನಿವೃತ್ತಿಯನ್ನು ಆಯ್ದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಕಂಪನಿ ಮೊದಲ ಬಾರಿಗೆ ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಕೆಲವು ಖಾಯಂ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಹೊರತಂದಿದೆ. ವಿಆರ್ಎಸ್ ಮಾರ್ಗಸೂಚಿ ಪ್ರಕಾರ 55 ವರ್ಷ ಮೇಲ್ಪಟ್ಟ ಅಥವಾ 20 ವರ್ಷಗಳಿಂದ ಸೇವೆ ಸಲ್ಲಿಸಿದವರಿಗೆ ಮಾತ್ರವೇ ಈ ಯೋಜನೆ ಅನ್ವಯವಾಗುತ್ತದೆ.

ಟಾಟಾ ಗ್ರೂಪ್ ಏರ್ಲೈನ್ನ ಕಾರ್ಯಾಚರಣೆಗೆ, ಸಂಸ್ಥೆಯ ಪರಿಷ್ಕರಣೆಗೆ, ಉತ್ಪಾದಕತೆಯನ್ನು ಸುಧಾರಿಸಲು ಹಾಗೂ ಹಳೆಯ ವ್ಯವಸ್ಥೆಗಳನ್ನು ತೆಗೆದು ಡಿಜಿಟಲೀಕರಣವಾಗಿ ಅಪ್ಡೇಟ್ ಮಾಡಲು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾದ ಮೇಲೆ ಅದೃಷ್ಟ ಸೌತ್ ಇಂಡಿಯಾದ ನಂಬರ್ 1 ನಟಿ ನಯನತಾರಾ ...!!!