Select Your Language

Notifications

webdunia
webdunia
webdunia
webdunia

ಮದುವೆಯಾದ ಮೇಲೆ ಅದೃಷ್ಟ ಸೌತ್ ಇಂಡಿಯಾದ ನಂಬರ್ 1 ನಟಿ ನಯನತಾರಾ ...!!!

ಮದುವೆಯಾದ ಮೇಲೆ ಅದೃಷ್ಟ  ಸೌತ್ ಇಂಡಿಯಾದ ನಂಬರ್ 1 ನಟಿ ನಯನತಾರಾ ...!!!
ಬೆಂಗಳೂರು , ಶುಕ್ರವಾರ, 22 ಜುಲೈ 2022 (20:03 IST)
ಮದುವೆಯಿಂದಾಗಿ ಭಾರೀ ಗಮನ ಸೆಳೆದಿದ್ದ ನಯನತಾರ ಇದೀಗ ಮತ್ತೊಂದು ಸುದ್ದಿಯಿಂದ ಚರ್ಚೆಯಲ್ಲಿದ್ದಾರೆ. ಲೇಡಿ ಸೂಪರ್​ಸ್ಟಾರ್​ ಎಂದೇ ಕರೆಸಿಕೊಂಡಿರುವ ನಯನತಾರ ಮದುವೆ ನಂತರವೂ ಬಹುಬೇಡಿಕೆಯ ನಟಿಯಾಗಿ ಕಾಯ್ದುಕೊಂಡಿದ್ದಾರೆ.
 
ಮದುವೆ ಬಳಿಕ ಮುಂದಿನ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ನಯನಾ ಈಗಾಗಲೇ ಜವಾನ್​ ಚಿತ್ರದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ. ಸದ್ಯ ತಮ್ಮ ಮುಂದಿನ ಸಿನಿಮಾಗಾಗಿ ಪಡೆದುಕೊಳ್ಳುತ್ತಿರುವ ಸಂಭಾವನೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
 
ಹಲವು ಟಾಪ್​ ನಟಿಯರನ್ನೂ ಹಿಂದಿಕ್ಕಿರುವ ನಯನತಾರಾ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದರು. ಮದುವೆಯಾದ ಬಳಿಕ ಇವರ ಸಂಭಾವನೆ ಇಳಿಯಬಹುದು ಎಂದೇ ಭಾವಿಸಲಾಗಿತ್ತು. ಆದರೆ ಈಗ ಇದು ಹುಸಿಯಾಗಿದೆ.
 
ಸದ್ಯ ಮುಂಬರುವ ಚಿತ್ರಕ್ಕಾಗಿ ನಯನತಾರ 10 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರಂತೆ. ಈ ಹಿಂದೆ 5 ಅಥವಾ 6 ಕೋಟಿ ಪಡೆಯುತ್ತಿದ್ದ ಸಂಭಾವನೆ ಈಗ ದುಪ್ಪಟ್ಟಾಗಿದೆ. ಒಂದು ವೇಳೆ ಈ ಸಂಭಾವನೆ ಪಡೆದಿದ್ದಲ್ಲಿ ನಟಿ ನಯನತಾರಾ ಅತಿ ಹೆಚ್ಚು ಸಂಭಾವನೆ ಪಡೆದ ದಕ್ಷಿಣ ಭಾರತದ ಏಕೈಕ ನಟಿ ಎನಿಸಿಕೊಳ್ಳಲಿದ್ದಾರೆ.
 
ಪ್ರಸ್ತುತ ಸೌತ್ ನಟಿಯರಲ್ಲಿ ಹೆಚ್ಚೆಂದರೆ 5 ಕೋಟಿಯ ತನಕ ಸಂಭಾವನೆಯನ್ನು ಪಡೆಯುವಲ್ಲಿ ರಶ್ಮಿಕಾ ಮಂದಣ್ಣ ಮತ್ತು ಪೂಜಾ ಹೆಗ್ಡೆ 

Share this Story:

Follow Webdunia kannada

ಮುಂದಿನ ಸುದ್ದಿ

ಗಜರಾಜನ ಎಂಟ್ರಿಗೆ ರೈತರು ಫುಲ್ ಸುಸ್ತು ...!!!