Publish Date: Fri, 22 Jul 2022 (18:49 IST)
Updated Date: Fri, 22 Jul 2022 (18:55 IST)
ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರೂ ಟ್ರಾಫಿಕ್ ಜಾಮ್, ವೀಕೆಂಡ್ ಬಂದರಂತೂ ಮುಗಿದೇ ಹೋಯ್ತು ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ನಿಲ್ಲಬೇಕು, ಶಾಪಿಂಗ್ ಮಾಡಬೇಕು ಅಂತ ಹೇಳಿದ್ರೆ ಕಾರ್ ಪಾರ್ಕಿಂಗ್ ಸಿಗೋದು ಕಷ್ಟ ಅಂತಾರೆ ಸಿಲಿಕಾನ್ ಸಿಟಿಯ ಮಂದ
ಗಾಂಧಿ ಬಜಾರ್‌ಗೆ ಶಾಪಿಂಗ್ ತೆರಳುವ ಜನರಿಗೆ ಪಾಲಿಗೆ ಸಿಹಿ ಸುದ್ದಿ ಕೊಟ್ಟಿದೆ. ಇದರಿಂದ ಶಾಪಿಂಗ್ ಹೊರಟ ಜನರಿಗೆ ಕಾರು ನಿಲ್ಲಿಸುವ ಸಮಸ್ಯೆಗೆ ಮುಕ್ತಿ ಸಿಗಲಿದೆ. ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿರುವ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್, ಗಾಂಧಿ ಬಜಾರ್‌ನ ಪಾಲಿಕೆ ಜಾಗದಲ್ಲಿ 19 ಕೋಟಿ ರೂ.ವೆಚ್ಚದಲ್ಲಿ ಬಹುಮಹಡಿ ಕಾರು ನಿಲುಗಡೆ ಕಟ್ಟಡ ನಿರ್ಮಾಣ ಮಾಡಲಿದೆ.
ಕಾರು ಪಾರ್ಕಿಂಗ್ ಜಾಗದಲ್ಲಿ ಶೌಚಗೃಹ ಸೇರಿ ಇತರೆ ಸೌಲಭ್ಯಗಳಿವೆ. ಈಗಾಗಲೇ ಟೆಂಡರ್ ಮುಗಿದಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ಸದ್ಯದಲ್ಲೇ ಶುರುವಾಗಲಿದೆ. ಬಹುಮಹಡಿ ಕಾರು ನಿಲುಗಡೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಇತ್ತೀಚಿನ ದಿನಗಳಷ್ಟೇ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.