Select Your Language

Notifications

webdunia
webdunia
webdunia
webdunia

ಟ್ವಿಟ್ಟರ್ ಉದ್ಯೋಗಿಗಳು ವಜಾ!

ಟ್ವಿಟ್ಟರ್  ಉದ್ಯೋಗಿಗಳು ವಜಾ!
ವಾಷಿಂಗ್ಟನ್ , ಶುಕ್ರವಾರ, 8 ಜುಲೈ 2022 (12:24 IST)
ವಾಷಿಂಗ್ಟನ್ : ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸುವುದಾಗಿ ಘೋಷಿಸಿದಾಗಿನಿಂದ ಟ್ವಿಟ್ಟರ್ ಉದ್ಯೋಗಿಗಳ ಭವಿಷ್ಯ ಅಪಾಯದಲ್ಲಿದೆ.

ಇದೀಗ ಕಂಪನಿ ತನ್ನ ಉದ್ಯೋಗಿಗಳನ್ನು ತೆಗೆದುಹಾಕಲು ಪ್ರಾರಂಭಿಸಿದ್ದು, 100 ಉದ್ಯೋಗಿಗಳನ್ನು ವಜಾಗೊಳಿಸಿರುವುದನ್ನು ಟ್ವಿಟ್ಟರ್ ಖಚಿತಪಡಿಸಿದೆ.

ಟ್ವಿಟ್ಟರ್ ಆರೋಗ್ಯಕರವಾಗಿರಬೇಕು ಎಂದು ಹೇಳಿಕೆ ನೀಡಿದ ಮಸ್ಕ್, ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಸುಳಿವು ನೀಡಿದ್ದರು. ಕಂಪನಿಯ ಸ್ವಾಧೀನವನ್ನು ಕೊನೆಗೊಳಿಸಲು ಟ್ವಿಟ್ಟರ್ ಈ ಹಿಂದೆಯೂ ನೇಮಕಾತಿಯನ್ನು ಸ್ಥಗಿತಗೊಳಿಸಿತ್ತು.

ಇದೀಗ ಮಾನವ ಸಂಪನ್ಮೂಲ ವಿಭಾಗದ 100 ಉದ್ಯೋಗಿಗಳು ಕಂಪನಿಯಿಂದ ವಜಾಗೊಂಡಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ!