Select Your Language

Notifications

webdunia
webdunia
webdunia
webdunia

ಅಗ್ನಿಪಥ್ ಯುವಕರು ತಿರಸ್ಕರಿಸಿದ್ದಾರೆ : ರಾಹುಲ್ ಗಾಂಧಿ

ಅಗ್ನಿಪಥ್ ಯುವಕರು ತಿರಸ್ಕರಿಸಿದ್ದಾರೆ : ರಾಹುಲ್ ಗಾಂಧಿ
ನವದೆಹಲಿ , ಶುಕ್ರವಾರ, 17 ಜೂನ್ 2022 (14:03 IST)
ನವದೆಹಲಿ : ಅಗ್ನಿಪಥ್ ಯೋಜನೆಯನ್ನು ಯುವಕರು ತಿರಸ್ಕರಿಸುತ್ತಿರುವ ಕುರಿತಾಗಿ ಟ್ವಿಟ್ಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಾಲೆಳೆದರು.

ಕೇಂದ್ರದ ಯೋಜನೆಗಳನ್ನು ದೇಶದ ಜನ ಸ್ವೀಕಾರ ಮಾಡುತ್ತಿಲ್ಲ. ಅಗ್ನಿಪಥ್ ಯೋಜನೆ ಯುವಕರಿಂದ ತಿರಸ್ಕರಿಸಲಾಗಿದೆ. ಕೃಷಿ ಕಾನೂನು – ರೈತರಿಂದ ತಿರಸ್ಕರಿಸಲಾಗಿದೆ. ನೋಟು ಅಮಾನ್ಯೀಕರಣವನ್ನು ಅರ್ಥಶಾಸ್ತ್ರಜ್ಞರು ನಿರಾಕರಿಸಿದ್ದಾರೆ.

ಗುರುವಾರ ಅಗ್ನಿಪಥ್ ವಿರೋಧಿಸಿ ಬಿಹಾರ, ಉತ್ತರಪ್ರದೇಶ ರಾಜ್ಯಗಳಲ್ಲಿ ಪ್ರತಿಭಟನೆಯ ಕಿಚ್ಚು ಹೆಚ್ಚಿದೆ. ಹಾಗಾಗಿ ಪೂರ್ವ ಮಧ್ಯ ರೈಲ್ವೆಯ 22 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. 

ಕಳೆದ 2 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಗುರುವಾರ ಬಿಹಾರದಲ್ಲಿ ನಡೆಯುತ್ತಿರುವ ಸೇನಾಕಾಂಕ್ಷಿಗಳ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ಸರ್ಕಾರವು ಅಗ್ನಿಪಥ್ ನೇಮಕಾತಿಯ ವಯೋಮಿತಿಯನ್ನು 21 ರಿಂದ 23ಕ್ಕೆ ಏರಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಾಟಕ ನಂಬಲು ಯುವಕರು ಮೂರ್ಖರಲ್ಲ : ಗುಂಡೂರಾವ್