Select Your Language

Notifications

webdunia
webdunia
webdunia
webdunia

ವಿಮಾನ ಖರೀದಿಗೆ ಮುಂದಾದ ಏರ್ ಇಂಡಿಯಾ

ವಿಮಾನ ಖರೀದಿಗೆ ಮುಂದಾದ ಏರ್ ಇಂಡಿಯಾ
ನವದೆಹಲಿ , ಮಂಗಳವಾರ, 21 ಜೂನ್ 2022 (09:54 IST)
ನವದೆಹಲಿ : ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ 200ಕ್ಕೂ ಹೆಚ್ಚು ಹೊಸ ವಿಮಾನಗಳನ್ನು ಖರೀದಿಸಲು ಮುಂದಾಗಿದೆ.

ಅವುಗಳಲ್ಲಿ ಶೇ.70 ರಷ್ಟು ಸಣ್ಣ ದೇಹವುಳ್ಳ ವಿಮಾನಗಳನ್ನು ಖರೀದಿಸಲು ಯೋಜಿಸಿದೆ ಎಂದು ವರದಿಗಳು ತಿಳಿಸಿವೆ.

ಏರ್ಬಸ್ ಎ350 ಅಗಲ ದೇಹದ ಏರ್ಕ್ರಾಫ್ಟ್ ಖರೀದಿಗೆ ಏರ್ಇಂಡಿಯಾ ಯೋಜನೆ ನಡೆಸಿದ್ದರೂ ಇಲ್ಲಿಯವರೆಗೆ ಖರೀದಿಸಲಾಗಿಲ್ಲ. ಇದೀಗ ಚಿಕ್ಕ ಗಾತ್ರದ ವಿಮಾನಗಳನ್ನು ಕೊಳ್ಳಲು ಏರ್ ಇಂಡಿಯಾ ವಿಮಾನ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿವೆ. 

ಕಳೆದ ವರ್ಷ ಅಕ್ಟೋಬರ್ 8 ರಂದು ಏರ್ಲೈನ್ಸ್ ಬಿಡ್ ಅನ್ನು ಟಾಟಾ ಗ್ರೂಪ್ ಯಶಸ್ವಿಯಾಗಿ ಗೆದ್ದು, ಈ ವರ್ಷ ಜನವರಿ 27 ರಂದು ಏರ್ ಇಂಡಿಯಾವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು.

ಇದೀಗ 200 ಹೊಸ ವಿಮಾನಗಳನ್ನು ಕೊಳ್ಳಲು ಮುಂದಾಗಿದ್ದು, ಅದರಲ್ಲಿ ಶೇ.70 ರಷ್ಟು ಚಿಕ್ಕ ವಿಮಾನಗಳು ಹಾಗೂ ಶೇ.30 ರಷ್ಟು ದೊಡ್ಡ ವಿಮಾನಗಳನ್ನು ಕೊಳ್ಳುವುದಾಗಿ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರ : ಪಾಕಿಸ್ತಾನದ ಪಂಜಾಬ್‌ನಲ್ಲಿ ತುರ್ತು ಪರಿಸ್ಥಿತಿ!