Publish Date: Mon, 20 Jun 2022 (11:02 IST)
Updated Date: Mon, 20 Jun 2022 (09:12 IST)
ಮುಂಬೈ: ಮುಂಬರುವ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯತ್ನಿಸುತ್ತಿರುವ ಕ್ರಿಕೆಟಿಗರಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗಡುವು ನೀಡಿದ್ದರು.
ಇಂಗ್ಲೆಂಡ್ ನಲ್ಲಿ ನಡೆಯಲಿರುವ ಟಿ20 ಸರಣಿಯಿಂದ ತೊಡಗಿ ವಿಶ್ವಕಪ್ ವರೆಗೆ ನಡೆಯಲಿರುವ ಎಲ್ಲಾ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಕೋಚ್ ರಾಹುಲ್ ದ್ರಾವಿಡ್ ಗುರುತಿಸಿ ವಿಶ್ವಕಪ್ ಗೆ ಅವಕಾಶ ನೀಡಲಿದ್ದಾರೆ.
ಹೀಗಾಗಿ ಟೀಂ ಇಂಡಿಯಾ ಆಟಗಾರರಿಗೆ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಟಿ20 ಸರಣಿ ಬಳಿಕ ಎಲ್ಲಾ ಪಂದ್ಯಗಳು ನಿರ್ಣಾಯಕವಾಗಲಿದೆ. ಈಗಾಗಲೇ ದ್ರಾವಿಡ್ ಅನೇಕ ಯುವ ಪ್ರತಿಭೆಗಳಿಗೆ ಅವಕಾಶ ನೀಡಿ ಪರೀಕ್ಷಿಸುತ್ತಿದ್ದಾರೆ. ಹೀಗಾಗಿ ಈಗ ನಡೆಯಲಿರುವ ಸರಣಿಗಳು ಟೀಂ ಇಂಡಿಯಾ ಆಟಗಾರರಿಗೆ ಪ್ರಮುಖವಾಗಲಿದೆ.