Publish Date: Sun, 19 Jun 2022 (09:40 IST)
Updated Date: Sun, 19 Jun 2022 (09:41 IST)
ಬೆಂಗಳೂರು: ಟೀಂ ಇಂಡಿಯಾಗೆ ನಾಯಕನಾಗುವ ಅಪೂರ್ವ ಅವಕಾಶ ಪಡೆದ ರಿಷಬ್ ಪಂತ್ ತಮ್ಮ ತಂಡ 2-2 ರಿಂದ ಸರಣಿ ಸಮಬಲಗೊಳಿಸಿರುವುದರ ಖುಷಿಯಲ್ಲಿರಬಹುದು. ಆದರೆ ವೈಯಕ್ತಿಕವಾಗಿ ಅವರೀಗ ಒತ್ತಡದಲ್ಲಿದ್ದಾರೆ.
ರಿಷಬ್ ಪಂತ್ ಕಳೆದ ನಾಲ್ಕೂ ಪಂದ್ಯಗಳಲ್ಲಿ ರನ್ ಗಳಿಸಲು ವಿಫಲರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಆಫ್ ಸ್ಟಂಪ್ ಆಚೆ ಹೋಗುವ ಚೆಂಡು ಕೆಣಕಿ ಸುಲಭವಾಗಿ ಔಟಾಗುತ್ತಿದ್ದಾರೆ.
ಇದರಿಂದ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಅವರ ಮೇಲೆ ಟೀಕಾಸ್ತ್ರ ನಡೆಸಿದ್ದಾರೆ. ಅತ್ತ ದಿನೇಶ್ ಕಾರ್ತಿಕ್ ಯಶಸ್ವಿಯಾಗುತ್ತಿರುವುದರಿಂದ ರಿಷಬ್ ಈಗ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ರನ್ ಗಳಿಸಲೇಬೇಕಾದ ಒತ್ತಡದಲ್ಲಿದ್ದಾರೆ.