Publish Date: Sun, 19 Jun 2022 (08:40 IST)
Updated Date: Sun, 19 Jun 2022 (08:56 IST)
ಬೆಂಗಳೂರು: ಭಾರತ ಮತ್ತು ದ.ಆಫ್ರಿಕಾ ನಡುವಿನ ಅಂತಿಮ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾನುವಾರ, ವೀಕೆಂಡ್ ರಜಾವನ್ನು ಪಂದ್ಯ ನೋಡುತ್ತಾ ಕಳೆಯಬಹುದು ಎಂದು ಲೆಕ್ಕಾಚಾರ ಹಾಕಿರುವ ಬೆಂಗಳೂರು ಫ್ಯಾನ್ಸ್ ಈಗ ಮಳೆ ಬಾರದಿರಲಿ ಎಂದು ಪ್ರಾರ್ಥಿಸುವಂತಾಗಿದೆ.
ಬೆಂಗಳೂರಿನ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಇಂದಿನ ಪಂದ್ಯಕ್ಕೆ ಮಳೆಯಾದರೆ ಸರಣಿ ಗೆಲ್ಲುವ ಭಾರತದ ಕನಸೂ ಭಗ್ನವಾಗಲಿದೆ.