Select Your Language

Notifications

webdunia
webdunia
webdunia
webdunia

ಡ್ರೆಸ್ಸಿಂಗ್ ರೂಂನ ಈ ವಾತಾವರಣಕ್ಕೆ ಕೋಚ್ ದ್ರಾವಿಡ್ ಕಾರಣ: ದಿನೇಶ್ ಕಾರ್ತಿಕ್ ಹೇಳಿಕೆ

ದಿನೇಶ್ ಕಾರ್ತಿಕ್
ರಾಜ್ ಕೋಟ್ , ಶನಿವಾರ, 18 ಜೂನ್ 2022 (09:10 IST)
ರಾಜ್ ಕೋಟ್: ದ.ಆಫ್ರಿಕಾ ವಿರುದ್ಧ ನಾಲ್ಕನೇ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ತಂಡದ ಗೆಲುವಿನ ರೂವಾರಿಯಾದ ಪಂದ್ಯಶ್ರೇಷ್ಠ ದಿನೇಶ್ ಕಾರ್ತಿಕ್ ಕೋಚ್ ದ್ರಾವಿಡ್ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.

ಪಂದ್ಯದ ಬಳಿಕ ಪ್ರಶಸ್ತಿ ಸ್ವೀಕರಿಸುವಾಗ ಮಾತನಾಡಿದ ದಿನೇಶ್ ಕಾರ್ತಿಕ್ ಡ್ರೆಸ್ಸಿಂಗ್ ರೂಂನಲ್ಲಿ ಈಗಿರುವ ವಾತಾವರಣಕ್ಕೆ ಕೋಚ್ ರಾಹುಲ್ ದ್ರಾವಿಡೇ ಕಾರಣ ಎಂದಿದ್ದಾರೆ.

‘ಮೂರು ಮತ್ತು ನಾಲ್ಕನೇ ಪಂದ್ಯದಲ್ಲಿ ಒತ್ತಡವನ್ನು ಅರಗಿಸಿಕೊಂಡ ನಮ್ಮ ಪರಿ ನಿಜಕ್ಕೂ ಮೆಚ್ಚುವಂತದ್ದು. ಇದಕ್ಕೆಲ್ಲಾ ಕಾರಣ ಕೋಚ್ ರಾಹುಲ್ ದ್ರಾವಿಡ್. ಡ್ರೆಸ್ಸಿಂಗ್ ರೂಂನಲ್ಲಿ ಈಗ ಒಂದು ರೀತಿಯ ಶಾಂತತೆಯಿದೆ. ಒತ್ತಡವನ್ನು ನಿಭಾಯಿಸಲು ಇದು ಸಹಾಯಕ. ಸ್ಪಷ್ಟತೆ ಮತ್ತು ಶಾಂತ ವಾತಾವರಣದಿಂದ ನಮಗೆ ಲಾಭವಾಗುತ್ತಿದೆ. ಇದರ ಕ್ರೆಡಿಟ್ ಕೋಚ್ ರಾಹುಲ್ ದ್ರಾವಿಡ್ ಗೆ ಸಲ್ಲಬೇಕು’ ಎಂದಿದ್ದಾರೆ ದಿನೇಶ್ ಕಾರ್ತಿಕ್. ಅಲ್ಲದೆ, ಮುಂದಿನ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಆರ್ ಸಿಬಿ ಪರ ಆಡುತ್ತಿದ್ದ ಕಾರಣಕ್ಕೆ ಇದು ನನ್ನ ತವರು ಮನೆಯಿದ್ದಂತೆ ಎಂದು ದಿನೇಶ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ‘ಆವೇಶ’ಕ್ಕೆ ಸೋತ ದ.ಆಫ್ರಿಕಾ